2 Chronicles 24:22 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೋವಾಷನು ಯೆಹೋಯಾದನ ಉಪಕಾರವನ್ನು ನೆನಸಲಿಲ್ಲ. ಯೆಹೋಯಾದನು ಜೆಕರ್ಯನ ತಂದೆ. ಯೆಹೋಯಾದನ ಮಗನನ್ನು ಯೆಹೋವಾಷನು ಕೊಂದನು. ಜೆಕರ್ಯನು ಸಾಯುವಾಗ, ಹೇಳಿದ್ದೇನೆಂದರೆ, “ನೀನು ಮಾಡುತ್ತಿರುವದನ್ನು ಯೆಹೋವನೇ ನೋಡಿ ನ್ಯಾಯ ತೀರಿಸಲಿ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವಾಷನು ಜೆಕರೀಯನ ತಂದೆಯಾದ ಯೆಹೋಯಾದನಿಂದ ತನಗಾದ ಕೃಪೆಯನ್ನು ಮರೆತು ಅವನ ಮಗನನ್ನು ಕೊಲ್ಲಿಸಿದನು. ಜೆಕರೀಯನು ಸಾಯುವಾಗ, “ಯೆಹೋವನೇ ಇದನ್ನು ನೋಡಿ, ತಕ್ಕ ಶಿಕ್ಷೆಯನ್ನು ವಿಧಿಸಲಿ” ಎಂದನು.
Kannada BSI Bible 2016
ಹಾಗೆಯೇ ಇವನ ತಂದೆಯಾದ ಯೆಹೋಯಾದನು ತನಗೆ ತೋರಿಸಿದ ಕೃಪೆಯನ್ನು ಜ್ಞಾಪಕಮಾಡದೆ ಅರಸನಾದ ಯೆಹೋವಾಷನು ಅವನ ಮಗನನ್ನು ಕೊಂದುಹಾಕಿದನು. ಇವನು ಸಾಯುವಾಗ--ಕರ್ತನು ನೋಡಿ ವಿಚಾರಿಸಲಿ ಎಂದು ಹೇಳಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವನು ಜೆಕರೀಯನ ತಂದೆಯಾದ ಯೆಹೋಯಾದನಿಂದ ತನಗುಂಟಾದ ಕೃಪೆಯನ್ನು ನೆನಪುಮಾಡಿಕೊಳ್ಳದೆ ಅವನ ಮಗನನ್ನು ಕೊಲ್ಲಿಸಿದನು. ಜೆಕರೀಯನು ಸಾಯುವಾಗ - ಯೆಹೋವನೇ ನೋಡಿ ವಿಚಾರಿಸಲಿ ಅಂದನು.
Kannada Bible (KNCL) BSI 2016
ಜೆಕರ್ಯನ ತಂದೆ ಯೆಹೋಯಾದನಿಂದ ತನಗಾದ ಉಪಕಾರವನ್ನು ನೆನಪುಮಾಡಿಕೊಳ್ಳದೆ ಈ ಯೆಹೋವಾಷನು ಅವನ ಮಗನನ್ನು ಕೊಲ್ಲಿಸಿದನು. ಜೆಕರೀಯನು ಸಾಯುವಾಗ, “ಸರ್ವೇಶ್ವರಸ್ವಾಮಿಯೇ ಇದನ್ನು ನೋಡಿ ತಕ್ಕ ಶಾಸ್ತಿಮಾಡಲಿ,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹಾಗೆಯೇ ಅರಸನಾದ ಯೋವಾಷನು, ಇವನ ತಂದೆಯಾದ ಯೆಹೋಯಾದಾವನು ತನಗೆ ತೋರಿಸಿದ ದಯೆಯನ್ನು ಜ್ಞಾಪಕಮಾಡದೆ ಅವನ ಮಗನನ್ನು ಕೊಂದುಹಾಕಿದನು. ಜೆಕರ್ಯನು ಸಾಯುವಾಗ, “ಯೆಹೋವ ದೇವರು ನೋಡಿ ವಿಚಾರಿಸಲಿ,” ಎಂದು ಹೇಳಿದನು.