2 Chronicles 24:27 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೋವಾಷನ ಮಕ್ಕಳ ಚರಿತ್ರೆ, ಅವನ ವಿರುದ್ಧವಾಗಿ ಹೇಳಿದ ಪ್ರವಾದನೆಗಳು, ಅವನು ದೇವಾಲಯವನ್ನು ಸರಿಪಡಿಸಿದ ವಿಷಯಗಳು ರಾಜರ ಗ್ರಂಥದ ವ್ಯಾಖ್ಯಾನದಲ್ಲಿ ಬರೆಯಲ್ಪಟ್ಟಿದೆ. ಯೆಹೋವಾಷನ ನಂತರ ಅವನ ಮಗನಾದ ಅಮಚ್ಯನು ರಾಜನಾದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನ ಮಕ್ಕಳು ಅವನಿಗೆ ವಿರುದ್ಧವಾಗಿ ಹೇಳಲಾದ ಅನೇಕ ದೈವೋಕ್ತಿಗಳೂ, ಹಾಗು ದೇವಾಲಯದ ಜೀರ್ಣೋದ್ಧಾರ ವೃತ್ತಾಂತವು, ರಾಜರ ಗ್ರಂಥದ ವ್ಯಾಖ್ಯಾನದಲ್ಲಿ ದಾಖಲಿಸಲಾಗಿದೆ. ಅವನಿಗೆ ಬದಲಾಗಿ ಅವನ ಮಗನಾದ ಅಮಚ್ಯನು ಅರಸನಾದನು.
Kannada BSI Bible 2016
ಆದರೆ ಅವನ ಕುಮಾರರನ್ನು ಕುರಿತೂ ಅವನ ಮೇಲೆ ಹಾಕಿದ ಭಾರಗಳನ್ನು ಕುರಿತೂ ದೇವರ ಆಲಯ ದುರಸ್ತು ಮಾಡುವದನ್ನು ಕುರಿತೂ ಇಗೋ, ಅವು ಅರಸುಗಳ ಚರಿತ್ರೆಯ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ. ಅವನ ಮಗ ನಾದ ಅಮಚ್ಯನು ಅವನಿಗೆ ಬದಲಾಗಿ ಆಳಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನ ಮಕ್ಕಳ ವಿವರವೂ ಅವನಿಗೆ ವಿರುದ್ಧವಾಗಿ ಹೇಳಲ್ಪಟ್ಟ ಅನೇಕ ದೈವೋಕ್ತಿಗಳೂ ದೇವಾಲಯದ ಜೀರ್ಣೋದ್ಧಾರವೃತ್ತಾಂತವೂ ರಾಜರ ಗ್ರಂಥದ ವ್ಯಾಖ್ಯಾನದಲ್ಲಿ ಬರೆದಿರುತ್ತವೆ. ಅವನಿಗೆ ಬದಲಾಗಿ ಅವನ ಮಗನಾದ ಅಮಚ್ಯನು ಅರಸನಾದನು.
Kannada Bible (KNCL) BSI 2016
ಅವನ ಮಕ್ಕಳ ವಿವರ, ಅವನಿಗೆ ವಿರುದ್ಧ ಹೇಳಲಾದ ಅನೇಕ ದೈವೋಕ್ತಿಗಳು ಹಾಗು ದೇವಾಲಯದ ದುರಸ್ತಿಯ ವೃತ್ತಾಂತ ಇವು ರಾಜರ ಗ್ರಂಥದ ವ್ಯಾಖ್ಯಾನದಲ್ಲಿ ಬರೆದಿರುತ್ತವೆ. ಅವನಿಗೆ ಬದಲಾಗಿ ಅವನ ಮಗ ಅಮಚ್ಯನು ಅರಸನಾದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಅವನ ಪುತ್ರನನ್ನು ಕುರಿತೂ, ಅವನ ವಿರುದ್ಧ ನುಡಿದ ಪ್ರವಾದನೆಯ ಕುರಿತೂ, ದೇವರ ಆಲಯ ದುರಸ್ತು ಮಾಡುವುದನ್ನು ಕುರಿತೂ, ಅರಸರ ಚರಿತ್ರೆಯ ಪುಸ್ತಕದಲ್ಲಿ ಬರೆದಿರುತ್ತವೆ. ಅವನ ಮಗ ಅಮಚ್ಯನು ಅವನಿಗೆ ಬದಲಾಗಿ ಅರಸನಾದನು.