2 Chronicles 24:7 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಗತಿಸಿದ ವರ್ಷಗಳಲ್ಲಿ ಅತಲ್ಯಳ ಮಕ್ಕಳು ದೇವಾಲಯದೊಳಗೆ ಬಲಾತ್ಕಾರದಿಂದ ನುಗ್ಗಿ ಅಲ್ಲಿದ್ದ ಪವಿತ್ರ ವಸ್ತುಗಳನ್ನು ತೆಗೆದು ಬಾಳ್ ದೇವರ ಪೂಜೆಗಾಗಿ ಉಪಯೋಗಿಸಿದ್ದರು. ಅತಲ್ಯಳು ಬಹಳ ದುಷ್ಟಳಾಗಿದ್ದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅತಿದುಷ್ಟಳಾದ ಅತಲ್ಯಳ ಮನೆಯವರು ದೇವಾಲಯವನ್ನು ಹಾಳುಮಾಡಿ, ಯೆಹೋವನ ಆಲಯದ ಪ್ರತಿಷ್ಠಿತ ವಸ್ತುಗಳನ್ನು ಬಾಳನಿಗಾಗಿ ಕೊಟ್ಟು ಬಿಟ್ಟಿದ್ದಾರಲ್ಲಾ?” ಎಂದು ಹೇಳಿದನು.
Kannada BSI Bible 2016
ಯಾಕಂದರೆ ಆ ದುಷ್ಟ ಸ್ತ್ರೀಯಾದ ಅತಲ್ಯಳ ಕುಮಾರರು ಕರ್ತನ ಆಲಯವನ್ನು ಒಡೆದು ಬಿಟ್ಟು ಕರ್ತನ ಆಲಯಕ್ಕೆ ಪ್ರತಿಷ್ಠೆಮಾಡಿ ದವುಗಳನ್ನೆಲ್ಲಾ ಬಾಳನಿಗೆ ಕೊಟ್ಟರು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅತಿ ದುಷ್ಟಳಾದ ಅತಲ್ಯಳ ಮನೆಯವರು ದೇವಾಲಯವನ್ನು ಹಾಳುಮಾಡಿ ಯೆಹೋವನ ಆಲಯದ ಪ್ರತಿಷ್ಠಿತ ವಸ್ತುಗಳನ್ನು ಬಾಳ್‍ದೇವತೆಗಳಿಗೋಸ್ಕರ ಕೊಟ್ಟುಬಿಟ್ಟರಲ್ಲಾ ಎಂದು ಹೇಳಿದನು.
Kannada Bible (KNCL) BSI 2016
ಅತಿದುಷ್ಟಳಾದ ಅತಲ್ಯಳ ಮನೆಯವರು ದೇವಾಲಯವನ್ನು ಹಾಳುಮಾಡಿ, ಸರ್ವೇಶ್ವರನ ಆಲಯದ ಪ್ರತಿಷ್ಠಿತ ವಸ್ತುಗಳನ್ನು ಬಾಳ್‍ದೇವತೆಗಳಿಗಾಗಿ ಕೊಟ್ಟುಬಿಟ್ಟಿದ್ದಾರಲ್ಲವೇ?,” ಎಂದು ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ದುಷ್ಟ ಸ್ತ್ರೀಯಾದ ಅತಲ್ಯಳ ಪುತ್ರರು ಯೆಹೋವ ದೇವರ ಆಲಯವನ್ನು ಒಡೆದುಬಿಟ್ಟು, ಯೆಹೋವ ದೇವರ ಆಲಯಕ್ಕೆ ಪ್ರತಿಷ್ಠೆ ಮಾಡಿದವುಗಳನ್ನೆಲ್ಲಾ ಬಾಳನಿಗೆ ಕೊಟ್ಟುಬಿಟ್ಟಿದ್ದರು.