2 Chronicles 25:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಎದೋಮ್ಯರನ್ನು ಸೋಲಿಸಿ ಅಮಚ್ಯನು ಮನೆಗೆ ಹಿಂದಿರುಗಿ ಬಂದನು. ಸೇಯೀರಿನ ಜನರು ಪೂಜಿಸುತ್ತಿದ್ದ ವಿಗ್ರಹಗಳನ್ನು ತನ್ನೊಂದಿಗೆ ತಂದನು. ಅವನು ಅವುಗಳನ್ನು ಪೂಜಿಸತೊಡಗಿ ಅಡ್ಡಬಿದ್ದು ಧೂಪ ಹಾಕಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಮಚ್ಯನು ಎದೋಮ್ಯರನ್ನು ಸೋಲಿಸಿ ಮನೆಗೆ ಬಂದ ಮೇಲೆ, ತಾನು ತೆಗೆದುಕೊಂಡು ಬಂದಿದ್ದ ಸೇಯೀರಿನವರ ದೇವತಾಪ್ರತಿಮೆಗಳನ್ನು ತನ್ನ ದೇವರುಗಳೆಂದು ಪ್ರತಿಷ್ಠಿಸಿ ಅವುಗಳಿಗೆ ಅಡ್ಡಬಿದ್ದು ಧೂಪ ಹಾಕುತ್ತಿದ್ದನು.
Kannada BSI Bible 2016
ಅಮಚ್ಯನು ಎದೋಮ್ಯರನ್ನು ಹೊಡೆದು ತಿರಿಗಿ ಬಂದ ತರುವಾಯ ಏನಾಯಿತಂದರೆ, ತಾನು ಸೇಯಾ ರನ ಮಕ್ಕಳ ದೇವರುಗಳನ್ನು ತಕ್ಕೊಂಡು ಬಂದು ಅವು ತನಗೆ ದೇವರುಗಳಾಗಿರುವ ಹಾಗೆ ನಿಲ್ಲಿಸಿಕೊಂಡು ಅವುಗಳ ಮುಂದೆ ಅಡ್ಡಬಿದ್ದು ಅವುಗಳಿಗೆ ಧೂಪವನ್ನು ಸುಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಮಚ್ಯನು ಎದೋಮ್ಯರನ್ನು ಸೋಲಿಸಿ ಮನೆಗೆ ಬಂದ ಮೇಲೆ ತಾನು ತೆಗೆದುಕೊಂಡು ಬಂದಿದ್ದ ಸೇಯೀರನವರ ದೇವತಾಪ್ರತಿಮೆಗಳನ್ನು ತನ್ನ ದೇವರುಗಳೆಂದು ನಿಲ್ಲಿಸಿ ಅವುಗಳಿಗೆ ಅಡ್ಡಬಿದ್ದು ಧೂಪಹಾಕುತ್ತಿದ್ದನು.
Kannada Bible (KNCL) BSI 2016
ಅಮಚ್ಯನು ಎದೋಮ್ಯರನ್ನು ಸೋಲಿಸಿ ಮನೆಗೆ ಬಂದ ಮೇಲೆ, ತಾನು ತೆಗೆದುಕೊಂಡು ಬಂದಿದ್ದ ಸೇಯೀರಿನವರ ದೇವತಾಪ್ರತಿಮೆಗಳನ್ನು ತನ್ನ ದೇವರುಗಳೆಂದು ನಿಲ್ಲಿಸಿ, ಅವುಗಳಿಗೆ ಅಡ್ಡಬಿದ್ದು ಧೂಪಾರತಿ ಎತ್ತುತ್ತಿದ್ದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅಮಚ್ಯನು ಎದೋಮ್ಯರನ್ನು ಹೊಡೆದು ತಿರುಗಿ ಬಂದ ತರುವಾಯ, ಸೇಯೀರನ ಮಕ್ಕಳ ದೇವರುಗಳನ್ನು ತೆಗೆದುಕೊಂಡು ಬಂದು, ಅವು ತನಗೆ ದೇವರುಗಳಾಗಿರುವ ಹಾಗೆ ನಿಲ್ಲಿಸಿಕೊಂಡು, ಅವುಗಳ ಮುಂದೆ ಅಡ್ಡಬಿದ್ದು, ಅವುಗಳಿಗೆ ಧೂಪವನ್ನು ಸುಟ್ಟನು.