2 Chronicles 25:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೋವನು ಅಮಚ್ಯನ ಮೇಲೆ ಸಿಟ್ಟುಗೊಂಡನು. ಅವನ ಬಳಿಗೆ ಒಬ್ಬ ಪ್ರವಾದಿಯನ್ನು ಕಳುಹಿಸಿ ಅವನಿಗೆ, “ಅಮಚ್ಯನೇ, ಆ ಜನರು ಪೂಜಿಸುವ ವಿಗ್ರಹಗಳಿಗೇಕೆ ನೀನು ಪೂಜೆ ಮಾಡುವೆ? ತಮ್ಮನ್ನು ಪೂಜಿಸುವವರನ್ನು ಆ ದೇವರುಗಳು ನಿನ್ನಿಂದ ಕಾಪಾಡಲಾರದೆ ಹೋದವು” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಯೆಹೋವನು ಅಮಚ್ಯನ ಮೇಲೆ ಬಹಳವಾಗಿ ಕೋಪಗೊಂಡು, ಅವನ ಬಳಿಗೆ ಪ್ರವಾದಿಯನ್ನು ಕಳುಹಿಸಿ ಅವನಿಗೆ, “ನಿನ್ನ ಕೈಯಿಂದ ನಿನ್ನ ಜನರನ್ನು ರಕ್ಷಿಸಲಾರದೆ ಹೋದ ಅನ್ಯದೇವತೆಗಳಲ್ಲಿ ಏಕೆ ಇಷ್ಟು ಭಕ್ತಿ?” ಎಂದು ಕೇಳಿದನು.
Kannada BSI Bible 2016
ಆದಕಾರಣ ಕರ್ತನ ಕೋಪವು ಅಮಚ್ಯನ ಮೇಲೆ ಹೊತ್ತಿತು; ಆತನು ಅವನ ಬಳಿಗೆ ಪ್ರವಾದಿ ಯನ್ನು ಕಳುಹಿಸಿದನು. ಅವನು ಅವನಿಗೆ--ತಮ್ಮ ಜನ ರನ್ನು ನಿನ್ನ ಕೈಯಿಂದ ತಪ್ಪಿಸಲಾರದ ದೇವರುಗಳನ್ನು ನೀನು ಹುಡುಕುವದೇನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಯೆಹೋವನು ಅಮಚ್ಯನ ಮೇಲೆ ಬಹಳವಾಗಿ ಕೋಪಗೊಂಡು ಅವನ ಬಳಿಗೆ ಪ್ರವಾದಿಯನ್ನು ಕಳುಹಿಸಿ ಅವನಿಗೆ - ನಿನ್ನ ಕೈಯಿಂದ ತಮ್ಮ ಜನರನ್ನು ತಪ್ಪಿಸಲಾರದೆಹೋದ ಅನ್ಯದೇವತೆಗಳಲ್ಲಿ ಭಕ್ತಿಯನ್ನೇಕೆ ಇಟ್ಟಿದ್ದೀ ಎಂದು ಹೇಳಿಸಿದನು.
Kannada Bible (KNCL) BSI 2016
ಆಗ ಸರ್ವೇಶ್ವರ ಅಮಚ್ಯನ ಮೇಲೆ ಬಹಳವಾಗಿ ಕೋಪಗೊಂಡು, ಅವನ ಬಳಿಗೆ ಪ್ರವಾದಿಯನ್ನು ಕಳುಹಿಸಿ, “ನಿನ್ನ ಕೈಯಿಂದ ತಮ್ಮ ಜನರನ್ನು ತಪ್ಪಿಸಲಾರದೆಹೋದ ಅನ್ಯದೇವತೆಗಳಲ್ಲಿ ಏಕೆ ಇಷ್ಟು ಭಕ್ತಿ?” ಎಂದು ಹೇಳಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದಕಾರಣ ಯೆಹೋವ ದೇವರ ಕೋಪವು ಅಮಚ್ಯನ ಮೇಲೆ ಬಂತು. ದೇವರು ಅವನ ಬಳಿಗೆ ಪ್ರವಾದಿಯನ್ನು ಕಳುಹಿಸಿದರು. ಪ್ರವಾದಿಯು ಅರಸನಿಗೆ, “ನಿನ್ನ ಕೈಯಿಂದ ತಮ್ಮ ಜನರನ್ನು ತಪ್ಪಿಸಲಾರದೆ ಹೋದ ದೇವರುಗಳನ್ನು ನೀನು ವಿಚಾರಿಸುವುದೇನು?” ಎಂದನು.