2 Chronicles 25:17 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅಮಚ್ಯನು ತನ್ನ ಸಲಹೆಗಾರರೊಂದಿಗೆ ಆಲೋಚನೆ ನಡಿಸಿದನು. ಬಳಿಕ ಇಸ್ರೇಲರ ಅರಸನಾದ ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಆದ ಯೋವಾಷನಿಗೆ, ‘ನಾವು ಮುಖಾಮುಖಿಯಾಗಿ ಸಂಧಿಸೋಣ’ ಎಂಬ ಸಂದೇಶವನ್ನು ಕಳುಹಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅನಂತರ ಯೆಹೂದದ ಅರಸನಾದ ಅಮಚ್ಯನು ಸಮಾಲೋಚನೆ ನಡೆಸಿ, ಯೇಹುವಿನ ಮೊಮ್ಮಗನೂ, ಯೆಹೋವಾಹಾಜನ ಮಗನೂ, ಇಸ್ರಾಯೇಲರ ಅರಸನೂ ಆದ ಯೋವಾಷನಿಗೆ, “ನಾವು ಒಬ್ಬರನ್ನೊಬ್ಬರು ಎದುರುಗೊಳ್ಳೋಣ” ಎಂದು ದೂತರ ಮುಖಾಂತರವಾಗಿ ಹೇಳಿ ಕಳುಹಿಸಿದನು.
Kannada BSI Bible 2016
ಆಗ ಯೆಹೂದದ ಅರಸನಾದ ಅಮಚ್ಯನು ಆಲೋಚನೆ ಕೇಳಿ, ಇಸ್ರಾಯೇಲಿನ ಅರಸನಾದ ಯೇಹುವಿನ ಮಗನಾದ ಯೆಹೋವಾಹಾಜನ ಮಗ ನಾದ ಯೋವಾಷನಿಗೆ--ನಾವು ಒಬ್ಬರ ಮುಖ ವನ್ನು ಒಬ್ಬರು ನೋಡೋಣ ಬಾ ಎಂದು ಹೇಳಿ ಕಳುಹಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅನಂತರ ಯೆಹೂದದ ಅರಸನಾದ ಅಮಚ್ಯನು ಮಂತ್ರಾಲೋಚನೆ ಕೇಳಿ ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಇಸ್ರಾಯೇಲ್ಯರ ಅರಸನೂ ಆದ ಯೋವಾಷನಿಗೆ - ನಾವು ಒಬ್ಬರನ್ನೊಬ್ಬರು ಎದುರುಗೊಳ್ಳೋಣ ಎಂದು ದೂತರ ಮುಖಾಂತರವಾಗಿ ಹೇಳಿಸಿದನು.
Kannada Bible (KNCL) BSI 2016
ಅನಂತರ ಜುದೇಯದ ಅರಸ ಅಮಚ್ಯನು ಸಮಾಲೋಚನೆ ನಡೆಸಿ, ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಇಸ್ರಯೇಲರ ಅರಸನೂ ಆದ ಯೋವಾಷನಿಗೆ, “ನಾವು ಒಬ್ಬರನ್ನೊಬ್ಬರು ಎದುರುಗೊಳ್ಳೋಣ,” ಎಂದು ದೂತರ ಮುಖಾಂತರ ಹೇಳಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಯೆಹೂದದ ಅರಸನಾದ ಅಮಚ್ಯನು ಆಲೋಚನೆ ಕೇಳಿ, ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಇಸ್ರಾಯೇಲರ ಅರಸನಾದ ಯೋವಾಷನಿಗೆ, “ನಾವು ಒಬ್ಬರನ್ನೊಬ್ಬರು ಎದುರಿಸೋಣ ಬಾ,” ಎಂದು ದೂತರ ಮುಖಾಂತರ ಹೇಳಿ ಕಳುಹಿಸಿದನು.