2 Chronicles 25:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅಮಚ್ಯನು ಅವನ ಮಾತಿಗೆ ಲಕ್ಷ್ಯಕೊಡಲಿಲ್ಲ. ಇದು ದೇವರಿಂದಲೇ ಆಯಿತು. ಇಸ್ರೇಲ್ ಯೆಹೂದವನ್ನು ಸೋಲಿಸಬೇಕೆಂದು ದೇವರ ಇಚ್ಛೆಯಾಗಿತ್ತು. ಯಾಕೆಂದರೆ ಯೆಹೂದದ ಜನರು ಎದೋಮ್ಯರ ದೇವರುಗಳನ್ನು ಆರಾಧಿಸುತ್ತಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಮಚ್ಯನು ಆ ಮಾತನ್ನು ಲಕ್ಷಿಸಲಿಲ್ಲ; ಅದು ದೇವರ ಸಂಕಲ್ಪದಿಂದಲೇ ಆಯಿತು. ಯೆಹೂದ್ಯರು ಎದೋಮ್ಯರ ದೇವತೆಗಳಲ್ಲಿ ಭಕ್ತಿಯನ್ನಿಟ್ಟದ್ದರಿಂದ ಅವರನ್ನು ಅಪಜಯ ಮಾಡಬೇಕೆಂದು ಯೆಹೋವನು ನಿರ್ಣಯಿಸಿದ್ದನು.
Kannada BSI Bible 2016
ಆದರೆ ಅಮ ಚ್ಯನು ಕೇಳದೆಹೋದನು. ಯಾಕಂದರೆ ಅವರು ಎದೋ ಮ್ಯರ ದೇವರುಗಳನ್ನು ಹುಡುಕಿದ ನಿಮಿತ್ತ ಅವರನ್ನು ಶತ್ರುಗಳ ಕೈಯಲ್ಲಿ ಒಪ್ಪಿಸುವ ಹಾಗೆ ಇದು ದೇವರಿಂದ ಆಯಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಮಚ್ಯನು ಆ ಮಾತನ್ನು ಲಕ್ಷಿಸಲಿಲ್ಲ; ಹಾಗಾಗಬೇಕೆಂಬದೇ ದೇವರ ಸಂಕಲ್ಪವಾಗಿತ್ತು. ಯೆಹೂದ್ಯರು ಎದೋಮ್ಯರ ದೇವತೆಗಳಲ್ಲಿ ಭಕ್ತಿಯನ್ನಿಟ್ಟದ್ದರಿಂದ ಅವರನ್ನು ಪರಾಧೀನಮಾಡಬೇಕೆಂದು ಆತನು ನಿರ್ಣಯಿಸಿದ್ದನು.
Kannada Bible (KNCL) BSI 2016
ಅಮಚ್ಯನು ಆ ಮಾತನ್ನು ಲಕ್ಷಿಸಲಿಲ್ಲ; ಹಾಗಾಗಬೇಕೆಂದೇ ದೇವರ ಸಂಕಲ್ಪವಾಗಿತ್ತು. ಯೆಹೂದ್ಯರೂ ಎದೋಮ್ಯರ ದೇವತೆಗಳಲ್ಲಿ ಭಕ್ತಿಯನ್ನಿಟ್ಟದ್ದರಿಂದ ಅವರನ್ನು ಪರಾಧೀನ ಮಾಡಬೇಕೆಂದು ದೇವರು ನಿರ್ಣಯಿಸಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಅಮಚ್ಯನು ಕೇಳದೆ ಹೋದನು. ಏಕೆಂದರೆ ಯೆಹೂದ್ಯರು ಎದೋಮ್ಯರ ದೇವರುಗಳನ್ನು ಹುಡುಕಿದ ನಿಮಿತ್ತ, ಅವರನ್ನು ಯೆಹೋವಾಷನ ಕೈಯಲ್ಲಿ ಒಪ್ಪಿಸುವಂತೆ ಇದು ದೇವರಿಂದ ಆಯಿತು.