2 Chronicles 25:6 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅಮಚ್ಯನು ಒಂದು ಲಕ್ಷ ಸೈನಿಕರನ್ನು ಇಸ್ರೇಲಿನಿಂದ ತರಿಸಿಕೊಂಡನು. ಅವರಿಗೆ ಮೂರು ಮುಕ್ಕಾಲು ಟನ್ ಬೆಳ್ಳಿಯನ್ನು ಸಂಬಳ ರೂಪದಲ್ಲಿ ಕೊಟ್ಟನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದಲ್ಲದೆ ಅವನು ನೂರು ತಲಾಂತು ಬೆಳ್ಳಿಯನ್ನು ಕೊಟ್ಟು, ಇಸ್ರಾಯೇಲರಿಂದಲೂ ಲಕ್ಷ ಮಂದಿ ಭಟರನ್ನು ತರಿಸಿದನು.
Kannada BSI Bible 2016
ಇದಲ್ಲದೆ ಇಸ್ರಾಯೇಲಿನವರಲ್ಲಿ ನೂರು ಬೆಳ್ಳಿ ತಲಾಂತುಗಳಿಂದ ಪರಾಕ್ರಮಶಾಲಿಗಳಾದ ಒಂದು ಲಕ್ಷ ಮಂದಿಯನ್ನು ಕೂಲಿಗೆ ತೆಗೆದುಕೊಂಡನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದಲ್ಲದೆ ಅವನು ನೂರು ತಲಾಂತು ಬೆಳ್ಳಿಯನ್ನು ಕೊಟ್ಟು ಇಸ್ರಾಯೇಲ್ಯರಿಂದಲೂ ಲಕ್ಷ ಮಂದಿ ಭಟರನ್ನು ತರಿಸಿದನು.
Kannada Bible (KNCL) BSI 2016
ಇದಲ್ಲದೆ 3400 ಕಿಲೋಗ್ರಾಂ ಬೆಳ್ಳಿಯನ್ನು ಕೊಟ್ಟು ಇಸ್ರಯೇಲರಿಂದಲೂ ಲಕ್ಷಮಂದಿ ಯೋಧರನ್ನು ತರಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಇಸ್ರಾಯೇಲಿನವರಿಗೆ 3,400 ಕಿಲೋಗ್ರಾಂ ಬೆಳ್ಳಿಯನ್ನು ಕೊಟ್ಟು, ಪರಾಕ್ರಮಶಾಲಿಗಳಾದ ಒಂದು ಲಕ್ಷ ಮಂದಿಯನ್ನು ಕೂಲಿಗೆ ತೆಗೆದುಕೊಂಡನು.