2 Chronicles 26:18 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಉಜ್ಜೀಯನೇ, ಯೆಹೋವನಿಗೆ ಧೂಪ ಹಾಕುವದು ನಿನ್ನ ಕೆಲಸವಲ್ಲ. ನೀನು ಹೀಗೆ ಮಾಡುವದು ಸರಿಯಲ್ಲ. ಆರೋನನ ಸಂತತಿಯವರಾದ ಯಾಜಕರೇ ಧೂಪ ಹಾಕಬೇಕಾದದ್ದು. ಅವರು ಪವಿತ್ರ ಸೇವೆಗೆ ನೇಮಿಸಲ್ಪಟ್ಟಿದ್ದಾರೆ. ನೀನು ಈ ಮಹಾ ಪವಿತ್ರಸ್ಥಾನದಿಂದ ಹೊರಗೆ ಹೋಗು. ನೀನು ದೇವರಾದ ಯೆಹೋವನಿಗೆ ವಿಧೇಯನಾಗಿಲ್ಲ. ಈ ಕಾರ್ಯವನ್ನು ಮಾಡಿದ್ದರಿಂದ ದೇವರು ನಿನ್ನನ್ನು ಮೆಚ್ಚುವದಿಲ್ಲ” ಎಂದು ಹೇಳಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅರಸನ ಎದುರಿಗೆ ನಿಂತು ಅವನಿಗೆ, “ಉಜ್ಜೀಯನೇ, ಯೆಹೋವನಿಗೋಸ್ಕರ ಧೂಪ ಹಾಕುವುದು ನಿನ್ನ ಕೆಲಸವಲ್ಲ; ಅದಕ್ಕೋಸ್ಕರ ಆರೋನನ ಸಂತಾನದವರಾದ ಯಾಜಕರು ಪ್ರತಿಷ್ಠಿತರಾಗಿದ್ದಾರೆ. ಪವಿತ್ರಾಲಯವನ್ನು ಬಿಟ್ಟುಹೋಗು; ನೀನು ಮಾಡುತ್ತಿರುವುದು ದ್ರೋಹ. ಇದಕ್ಕೆ ದೇವರಾದ ಯೆಹೋವನಿಂದ ನಿನಗೆ ಗೌರವ ದೊರಕಲಾರದು” ಎಂದರು.
Kannada BSI Bible 2016
ಉಜ್ಜೀಯನೇ, ಕರ್ತ ನಿಗೆ ಧೂಪಸುಡುವದು ನಿನಗೆ ಸೇರಿದ್ದಲ್ಲ; ಧೂಪ ಸುಡುವದು ಪರಿಶುದ್ಧ ಮಾಡಲ್ಪಟ್ಟ ಯಾಜಕರಾದ ಆರೋನನ ಮಕ್ಕಳಿಗೆ ಸೇರಿದ್ದು; ನೀನು ಪರಿಶುದ್ಧ ಸ್ಥಾನದಿಂದ ಹೊರಟುಹೋಗು; ನೀನು ಅಪರಾಧ ಮಾಡಿದ್ದೀ. ದೇವರಾದ ಕರ್ತನಿಂದ ಇದು ನಿನಗೆ ಮಾನವಲ್ಲ ಅಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನಿಗೆ - ಉಜ್ಜೀಯನೇ, ಯೆಹೋವನಿಗೋಸ್ಕರ ಧೂಪ ಹಾಕುವದು ನಿನ್ನ ಕೆಲಸವಲ್ಲ; ಅದಕ್ಕೋಸ್ಕರ ಆರೋನನ ಸಂತಾನದವರಾದ ಯಾಜಕರು ಪ್ರತಿಷ್ಠಿತರಾಗಿದ್ದಾರೆ. ಪವಿತ್ರಾಲಯವನ್ನು ಬಿಟ್ಟುಹೋಗು; ನೀನು ದ್ರೋಹಿ. ಇದಕ್ಕಾಗಿ ದೇವರಾದ ಯೆಹೋವನಿಂದ ನಿನಗೆ ಮಾನವುಂಟಾಗಲಾರದು ಅನ್ನಲು
Kannada Bible (KNCL) BSI 2016
“ಉಜ್ಜೀಯರೇ, ಸರ್ವೇಶ್ವರನಿಗೆ ಧೂಪಾರತಿ ಎತ್ತುವುದು ನಿಮ್ಮ ಕೆಲಸವಲ್ಲ; ಅದಕ್ಕೆ ಆರೋನನ ಸಂತಾನದವರ ಯಾಜಕರು ಪ್ರತಿಷ್ಠಿತರಾಗಿದ್ದಾರೆ. ಪವಿತ್ರಾಲಯವನ್ನು ಬಿಟ್ಟು ಹೋಗಿ; ನೀವು ಮಾಡುತ್ತಿರುವುದು ದ್ರೋಹ. ಇದಕ್ಕೆ ದೇವರಾದ ಸರ್ವೇಶ್ವರನಿಂದ ನಿಮಗೆ ಮರ್ಯಾದೆ ದೊರಕಲಾರದು,” ಎಂದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನನ್ನು ಎದುರಿಸಿ, “ಉಜ್ಜೀಯನೇ, ಯೆಹೋವ ದೇವರಿಗೆ ಧೂಪ ಸುಡುವುದು ಪ್ರತಿಷ್ಠಿತರಾದ ಯಾಜಕರಾದ ಆರೋನನ ಮಕ್ಕಳಿಗೆ ಸೇರಿದ್ದು. ನೀನು ಪರಿಶುದ್ಧ ಸ್ಥಳದಿಂದ ಹೊರಟು ಹೋಗು, ಅಪರಾಧ ಮಾಡಿದೆ. ದೇವರಾದ ಯೆಹೋವ ದೇವರಿಂದ ನಿನಗೆ ಗೌರವ ದೊರಕದು,” ಎಂದನು.