2 Chronicles 26:19 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇದನ್ನು ಕೇಳಿ ಉಜ್ಜೀಯನು ಕೋಪಗೊಂಡನು. ಅವನು ಧೂಪ ಹಾಕಲು ಧೂಪಾರತಿಯನ್ನು ಕೈಯಲ್ಲಿ ಹಿಡಿದುಕೊಂಡಿದ್ದನು. ಅವನು ಯಾಜಕರ ಮೇಲೆ ಕೋಪಿಸಿಕೊಂಡಾಗ ಕುಷ್ಠರೋಗವು ಅವನ ಹಣೆಯಲ್ಲಿ ಕಾಣಿಸಿಕೊಂಡಿತು. ಇದು ಯಾಜಕರ ಮುಂದೆ ದೇವಾಲಯದೊಳಗೆ ಧೂಪವೇದಿಕೆಯ ಬಳಿಯಲ್ಲೇ ಆಯಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಧೂಪ ಹಾಕಬೇಕೆಂದು ಕೈಯಲ್ಲಿ ಧೂಪಾರತಿಯನ್ನು ಹಿಡಿದುಕೊಂಡಿದ್ದ ಉಜ್ಜೀಯನು ಕೋಪಗೊಂಡನು. ಅವನು ಯೆಹೋವನ ಆಲಯದ ಧೂಪವೇದಿಯ ಬಳಿಯಲ್ಲಿ ನಿಂತು, ಯಾಜಕರೊಡನೆ ಸಿಟ್ಟಿನಿಂದ ಮಾತನಾಡುತ್ತಿರುವಾಗಲೆ ಯಾಜಕರ ಸಮಕ್ಷಮದಲ್ಲೇ, ಅವನ ಹಣೆಯ ಮೇಲೆ ಕುಷ್ಠವು ಕಾಣಿಸಿಕೊಂಡಿತು.
Kannada BSI Bible 2016
ಆಗ ಉಜ್ಜೀಯನು ಕೋಪಿಸಿ ಕೊಂಡನು; ಧೂಪವನ್ನು ಸುಡಲು ಅವನ ಕೈಯಲ್ಲಿ ಧೂಪಾರತಿ ಇತ್ತು. ಅವನು ಯಾಜಕರ ಮೇಲೆ ಕೋಪ ಮಾಡುವಾಗ ಕರ್ತನ ಮಂದಿರದಲ್ಲಿರುವ ಧೂಪಪೀಠದ ಬಳಿಯಲ್ಲಿ ನಿಂತ ಯಾಜಕರ ಮುಂದೆ ಅವನ ಹಣೆಯಲ್ಲಿ ಕುಷ್ಠವು ಎದ್ದಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಧೂಪಹಾಕಬೇಕೆಂದು ಕೈಯಲ್ಲಿ ಧೂಪಾರತಿಯನ್ನು ಹಿಡಿದಿದ್ದ ಉಜ್ಜೀಯನು ಕೋಪವುಳ್ಳವನಾದನು. ಅವನು ಯೆಹೋವನ ಆಲಯದ ಧೂಪವೇದಿಯ ಬಳಿಯಲ್ಲಿ ನಿಂತು ಯಾಜಕರೊಡನೆ ಸಿಟ್ಟಿನಿಂದ ಮಾತಾಡುತ್ತಿರುವಾಗ ಯಾಜಕರ ಸಮಕ್ಷದಲ್ಲೇ ಅವನ ಹಣೆಯಲ್ಲಿ ಕುಷ್ಠ ಹುಟ್ಟಿತು.
Kannada Bible (KNCL) BSI 2016
ಧೂಪಾರತಿ ಎತ್ತಬೇಕೆಂದು ಕೈಯಲ್ಲಿ ಧೂಪಕಳಸ ವನ್ನು ಹಿಡಿದಿದ್ದ ಉಜ್ಜೀಯನು ಕೋಪಗೊಂಡನು. ಸರ್ವೇಶ್ವರನ ಆಲಯದ ಧೂಪವೇದಿಯ ಬಳಿಯಲ್ಲಿ ನಿಂತು, ಯಾಜಕ ರೊಡನೆ ಅವನು ಸಿಟ್ಟಿನಿಂದ ಮಾತಾಡುತ್ತಿರುವಾಗಲೆ ಯಾಜಕರ ಸಮಕ್ಷಮದಲ್ಲೇ, ಅವನ ಹಣೆಯಲ್ಲಿ ಕುಷ್ಠ ಹುಟ್ಟಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಉಜ್ಜೀಯನು ಕೋಪಿಸಿಕೊಂಡನು. ಧೂಪವನ್ನು ಸುಡಲು ಅವನ ಕೈಯಲ್ಲಿ ಧೂಪಾರತಿ ಇತ್ತು. ಆದರೆ ಅವನು ಯಾಜಕರ ಮೇಲೆ ಕೋಪ ಮಾಡುತ್ತಿರುವಾಗಲೇ, ಯೆಹೋವ ದೇವರ ಮಂದಿರದಲ್ಲಿರುವ ಧೂಪಪೀಠದ ಬಳಿಯಲ್ಲಿ ನಿಂತ ಯಾಜಕರ ಮುಂದೆ ಅವನ ಹಣೆಯಲ್ಲಿ ಕುಷ್ಠವು ಬಂದಿತು.