2 Chronicles 28:11 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈಗ ನೀವು ನನ್ನ ಮಾತನ್ನು ಕೇಳಿರಿ, ನೀವು ಸೆರೆಹಿಡಿದ ನಿಮ್ಮ ಸಹೋದರ ಸಹೋದರಿಯರನ್ನು ಹಿಂದಕ್ಕೆ ಕಳುಹಿಸಿರಿ. ಯಾಕೆಂದರೆ ಯೆಹೋವನು ನಿಮ್ಮ ಮೇಲೆ ಬಹಳವಾಗಿ ಕೋಪಗೊಂಡಿದ್ದಾನೆ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈಗ ನೀವು ನನ್ನ ಮಾತಿಗೆ ಕಿವಿಗೊಟ್ಟು ನಿಮ್ಮ ಸಹೋದರರಿಂದ ಸೆರೆಯಾಗಿ ತಂದವರನ್ನು ಹಿಂದಕ್ಕೆ ಕಳುಹಿಸಿರಿ; ಇಲ್ಲವಾದರೆ ಯೆಹೋವನ ಕೋಪಾಗ್ನಿಯೂ ನಿಮ್ಮ ಮೇಲೆ ಉರಿಯುತ್ತದೆಯಷ್ಟೇ” ಎಂದನು.
Kannada BSI Bible 2016
ಆದದ ರಿಂದ ನೀವು ನನ್ನ ಮಾತು ಕೇಳಿ ನಿಮ್ಮ ಸಹೋದರ ರಲ್ಲಿ ನೀವು ಸೆರೆಯಾಗಿ ತಕ್ಕೊಂಡ ಸೆರೆಯವರನ್ನು ಬಿಟ್ಟುಬಿಡಿರಿ. ಯಾಕಂದರೆ ಉರಿಯುತ್ತಿರುವ ಕರ್ತನ ಕೋಪವು ನಿಮ್ಮ ಮೇಲೆ ಇರುವದು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಈಗ ನೀವು ನನ್ನ ಮಾತಿಗೆ ಕಿವಿಗೊಟ್ಟು ನಿಮ್ಮ ಸಹೋದರರಿಂದ ಸೆರೆಯಾಗಿ ತಂದವರನ್ನು ಹಿಂದಕ್ಕೆ ಕಳುಹಿಸಿರಿ; ಯೆಹೋವನ ಕೋಪಾಗ್ನಿಯು ನಿಮ್ಮ ಮೇಲೆ ಉರಿಯುತ್ತಾ ಇದೆ ಅಂದನು.
Kannada Bible (KNCL) BSI 2016
ಈಗ ನೀವು ನನ್ನ ಮಾತಿಗೆ ಕಿವಿಗೊಟ್ಟು ನಿಮ್ಮ ಸಹೋದರರಿಂದ ಸೆರೆಯಾಗಿ ತಂದವರನ್ನು ಹಿಂದಕ್ಕೆ ಕಳುಹಿಸಿರಿ; ಸರ್ವೇಶ್ವರನ ಕೋಪಾಗ್ನಿ ನಿಮ್ಮ ಮೇಲೆ ಉರಿಯುತ್ತಾ ಇದೆ!” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದ್ದರಿಂದ ನೀವು ನನ್ನ ಮಾತು ಕೇಳಿ ನಿಮ್ಮ ನಿಮ್ಮ ಸಹೋದರರಲ್ಲಿ ನೀವು ಸೆರೆಯಾಗಿ ತೆಗೆದುಕೊಂಡ ಸೆರೆಯವರನ್ನು ಬಿಟ್ಟುಬಿಡಿರಿ. ಏಕೆಂದರೆ ಯೆಹೋವ ದೇವರ ಕೋಪಾಗ್ನಿಯು ನಿಮ್ಮ ಮೇಲೆ ಇರುವುದು,” ಎಂದನು.