2 Chronicles 29:10 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದ್ದರಿಂದ ಹಿಜ್ಕೀಯನಾದ ನಾನು ಇಸ್ರೇಲರ ದೇವರಾದ ಯೆಹೋವನೊಂದಿಗೆ ಒಡಂಬಡಿಕೆ ಮಾಡುತ್ತೇನೆ. ಆತನು ಇನ್ನು ಮುಂದೆ ನಮ್ಮ ಮೇಲೆ ಸಿಟ್ಟುಗೊಳ್ಳುವುದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈಗ ನಮ್ಮ ಮೇಲಿರುವ ಆತನ ಕೋಪಾಗ್ನಿಯು ತೊಲಗಿ ಹೋಗುವಂತೆ ಇಸ್ರಾಯೇಲಿನ ದೇವರಾದ ಯೆಹೋವನೊಡನೆ ಒಡಂಬಡಿಕೆ ಮಾಡಿಕೊಳ್ಳುವುದಕ್ಕೆ ಮನಸ್ಸುಳ್ಳವನಾಗಿದ್ದೇನೆ.
Kannada BSI Bible 2016
ಈಗ ಇಸ್ರಾಯೇಲಿನ ದೇವರಾದ ಕರ್ತನ ಉಗ್ರಕೋಪವು ನಮ್ಮನ್ನು ಬಿಟ್ಟು ಹೋಗುವ ಹಾಗೆ ನಾನು ಆತನ ಸಂಗಡ ಒಡಂಬಡಿ ಕೆಯನ್ನು ಮಾಡಲು ಮನಸ್ಸುಳ್ಳವನಾಗಿದ್ದೇನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಈಗ ನಮ್ಮ ಮೇಲಿರುವ ಆತನ ಕೋಪಾಗ್ನಿಯು ತೊಲಗಿಹೋಗುವಂತೆ ಇಸ್ರಾಯೇಲ್‍ದೇವರಾದ ಯೆಹೋವನೊಡನೆ ಒಡಂಬಡಿಕೆ ಮಾಡಿಕೊಳ್ಳುವದಕ್ಕೆ ಮನಸ್ಸುಳ್ಳವನಾಗಿದ್ದೇನೆ.
Kannada Bible (KNCL) BSI 2016
ಈಗ ನಮ್ಮ ಮೇಲಿರುವ ದೈವಕೋಪಾಗ್ನಿ ತೊಲಗಿಹೋಗುವಂತೆ ಇಸ್ರಯೇಲ್ ದೇವರಾದ ಸರ್ವೇಶ್ವರನೊಡನೆ ಒಡಂಬಡಿಕೆ ಮಾಡಿಕೊಳ್ಳುವುದಕ್ಕೆ ತೀರ್ಮಾನಿಸಿದ್ದೇನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈಗ ಇಸ್ರಾಯೇಲಿನ ದೇವರಾದ ಯೆಹೋವ ದೇವರ ಉಗ್ರಕೋಪವು ನಮ್ಮನ್ನು ಬಿಟ್ಟುಹೋಗುವ ಹಾಗೆ, ನಾನು ಅವರ ಸಂಗಡ ಒಡಂಬಡಿಕೆಯನ್ನು ಮಾಡಲು ಮನಸ್ಸುಳ್ಳವನಾಗಿದ್ದೇನೆ.