2 Chronicles 29:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯಾಜಕರು ದೇವಾಲಯದ ಒಳಭಾಗವನ್ನು ಪ್ರವೇಶಿಸಿ ಶುಚಿಮಾಡಿದರು. ದೇವಾಲಯದೊಳಗೆ ಇದ್ದ ಎಲ್ಲಾ ಹೊಲಸು ವಸ್ತುಗಳನ್ನು ಹೊರತೆಗೆದರು. ದೇವಾಲಯದ ಅಂಗಳಕ್ಕೆ ತಂದು ಅಲ್ಲಿಂದ ಕಿದ್ರೋನ್ ಹಳ್ಳಕ್ಕೆ ತೆಗೆದುಕೊಂಡು ಹೋಗಿ ಬಿಸಾಡಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯಾಜಕರು ಯೆಹೋವನ ಆಲಯವನ್ನು ಶುದ್ಧಮಾಡುವುದಕ್ಕಾಗಿ ಒಳಗೆ ಹೋಗಿ ಪವಿತ್ರಸ್ಥಾನದಲ್ಲಿದ್ದ ಹೊಲಸನ್ನೆಲ್ಲಾ ತಂದು ಪ್ರಾಕಾರದಲ್ಲಿ ಹಾಕಿದರು. ಲೇವಿಯರು ಅದನ್ನು ಕೂಡಿಸಿ ಹೊರಗೆ ಒಯ್ದು ಕಿದ್ರೋನ್ ಹಳ್ಳದಲ್ಲಿ ಹಾಕಿದರು.
Kannada BSI Bible 2016
ಯಾಜ ಕರು ಕರ್ತನ ಆಲಯವನ್ನು ಶುಚಿಮಾಡಲು ಅದರ ಒಳಭಾಗದಲ್ಲಿ ಪ್ರವೇಶಿಸಿ ಕರ್ತನ ಮಂದಿರದಲ್ಲಿ ಕಂಡ ಮೈಲಿಗೆಯನ್ನು ಕರ್ತನ ಮನೆಯ ಅಂಗಳದೊಳಗೆ ತಂದರು; ಆಗ ಲೇವಿಯರು ಅದನ್ನು ತೆಗೆದುಕೊಂಡು ಕಿದ್ರೋನು ಹಳ್ಳದಲ್ಲಿ ಹಾಕಲು ಹೊರಗೆ ಒಯ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯಾಜಕರು ಯೆಹೋವನ ಆಲಯವನ್ನು ಶುದ್ಧಮಾಡುವದಕ್ಕೋಸ್ಕರ ಒಳಗೆ ಹೋಗಿ ಪವಿತ್ರಸ್ಥಾನದಲ್ಲಿದ್ದ ಹೊಲಸನ್ನೆಲ್ಲಾ ತಂದು ಪ್ರಾಕಾರದಲ್ಲಿ ಹಾಕಿದರು. ಲೇವಿಯರು ಅದನ್ನು ಕೂಡಿಸಿ ಹೊರಗೆ ಒಯ್ದು ಕಿದ್ರೋನ್ ಹಳ್ಳದಲ್ಲಿ ಹಾಕಿದರು.
Kannada Bible (KNCL) BSI 2016
ಯಾಜಕರು ಸರ್ವೇಶ್ವರನ ಆಲಯವನ್ನು‍ ಶುದ್ಧಮಾಡುವುದಕ್ಕೆ ಒಳಗೆ ಹೋಗಿ ಪವಿತ್ರಸ್ಥಾನದಲ್ಲಿದ್ದ ಹೊಲಸನ್ನೆಲ್ಲಾ ಹೊರಗೆ ತಂದು ಪ್ರಾಕಾರದಲ್ಲಿ ಹಾಕಿದರು. ಲೇವಿಯರು ಅದನ್ನು ಕೂಡಿಸಿ ಹೊರಗೆ ಒಯ್ದು ಕಿದ್ರೋನ್ ಹಳ್ಳದಲ್ಲಿ ಹಾಕಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯಾಜಕರು ಯೆಹೋವ ದೇವರ ಆಲಯವನ್ನು ಶುದ್ಧಿಮಾಡಲು ಅದರ ಒಳಭಾಗವನ್ನು ಪ್ರವೇಶಿಸಿ, ಯೆಹೋವ ದೇವರ ಮಂದಿರದಲ್ಲಿ ಕಂಡ ಮೈಲಿಗೆಯನ್ನು ಯೆಹೋವ ದೇವರ ಆಲಯದ ಅಂಗಳದೊಳಗೆ ತಂದರು. ಆಗ ಲೇವಿಯರು ಅದನ್ನು ತೆಗೆದುಕೊಂಡು, ಕಿದ್ರೋನ್ ಹಳ್ಳದಲ್ಲಿ ಹಾಕಲು ಹೊರಗೆ ಒಯ್ದರು.