2 Chronicles 29:18 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅನಂತರ ಅವರು ಅರಸನಾದ ಹಿಜ್ಕೀಯನ ಬಳಿಗೆ ಹೋಗಿ, “ಅರಸನಾದ ಹಿಜ್ಕೀಯನೇ, ನಾವು ದೇವಾಲಯವನ್ನೂ ಯಜ್ಞವೇದಿಕೆಯನ್ನೂ ದೇವಾಲಯದ ಸಾಮಾಗ್ರಿಗಳನ್ನೂ ಶುದ್ಧ ಮಾಡಿದೆವು. ರೊಟ್ಟಿಯನ್ನಿಡುವ ಮೇಜನ್ನೂ ಶುದ್ಧ ಮಾಡಿದೆವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಮೇಲೆ ಅವರು ಅರಮನೆಯೊಳಗೆ ಹೋಗಿ, ಅರಸನಾದ ಹಿಜ್ಕೀಯನಿಗೆ, “ನಾವು ಯೆಹೋವನ ಸಮಸ್ತಾಲಯವನ್ನೂ, ಯಜ್ಞವೇದಿಯನ್ನೂ, ಅದರ ಉಪಕರಣಗಳನ್ನೂ, ನೈವೇದ್ಯ ರೊಟ್ಟಿಗಳನ್ನಿಡತಕ್ಕ ಮೇಜನ್ನೂ ಹಾಗು ಅದರ ಸಾಮಾನುಗಳನ್ನೂ ಶುದ್ಧಿಮಾಡಿದೆವು.
Kannada BSI Bible 2016
ಆಗ ಅವರು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ--ಕರ್ತನ ಸಮಸ್ತ ಆಲಯವನ್ನೂ ದಹನಬಲಿಯ ಯಜ್ಞವೇದಿಯನ್ನೂ ಅದರ ಎಲ್ಲಾ ಪಾತ್ರೆಗಳನ್ನೂ ಸಮ್ಮುಖದ ರೊಟ್ಟಿಯ ಮೇಜನ್ನೂ ಅದರ ಎಲ್ಲಾ ಪಾತ್ರೆಗಳನ್ನೂ ಶುಚಿಮಾಡಿದೆವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಮೇಲೆ ಅವರು ಅರಮನೆಯೊಳಕ್ಕೆ ಹೋಗಿ ಅರಸನಾದ ಹಿಜ್ಕೀಯನಿಗೆ - ನಾವು ಯೆಹೋವನ ಸಮಸ್ತಾಲಯವನ್ನೂ ಯಜ್ಞವೇದಿಯನ್ನೂ ಅದರ ಉಪಕರಣಗಳನ್ನೂ ನೈವೇದ್ಯವಾದ ರೊಟ್ಟಿಗಳನ್ನಿಡತಕ್ಕ ಮೇಜನ್ನೂ ಅದರ ಸಾಮಾನುಗಳನ್ನೂ ಶುದ್ಧಮಾಡಿದೆವು.
Kannada Bible (KNCL) BSI 2016
ಆಮೇಲೆ ಅವರು ಅರಮನೆಗೆ ಹೋಗಿ, ಅರಸ ಹಿಜ್ಕೀಯನಿಗೆ, “ನಾವು ಸರ್ವೇಶ್ವರನ ಆಲಯವನ್ನು ಪೂರ್ತಿಯಾಗಿ ಶುದ್ಧೀಕರಿಸಿದೆವು. ಬಲಿಪೀಠವನ್ನು, ಅದರ ಉಪಕರಣಗಳನ್ನು, ನೈವೇದ್ಯ ರೊಟ್ಟಿಗಳನ್ನಿಡತಕ್ಕ ಮೇಜನ್ನು ಹಾಗು ಅದರ ಸಾಮಗ್ರಿಗಳನ್ನೂ ಶುದ್ಧಮಾಡಿದೆವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವರು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ, “ಯೆಹೋವ ದೇವರ ಆಲಯವನ್ನೆಲ್ಲಾ, ದಹನಬಲಿಪೀಠವನ್ನೂ, ನೈವೇದ್ಯ ರೊಟ್ಟಿಗಳನ್ನಿಡತಕ್ಕ ಮೇಜನ್ನು, ಅದರ ಎಲ್ಲಾ ಪಾತ್ರೆಗಳನ್ನೂ ಶುದ್ಧಿಮಾಡಿದೆವು.