2 Chronicles 29:19 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಹಾಜನು ಅರಸನಾಗಿದ್ದ ಕಾಲದಲ್ಲಿ ಅವನು ದೇವರಿಗೆ ವಿರುದ್ಧವಾಗಿ ಎದ್ದನು. ದೇವಾಲಯದೊಳಗಿದ್ದ ಅನೇಕ ವಸ್ತುಗಳನ್ನು ಎತ್ತಿ ಬಿಸಾಡಿದನು. ಆದರೆ ನಾವು ಅವುಗಳನ್ನೆಲ್ಲಾ ಮತ್ತೆ ಯಥಾ ಸ್ಥಾನದಲ್ಲಿರಿಸಿ ಅದರ ವಿಶೇಷ ಉಪಯೋಗಕ್ಕಾಗಿ ಸಿದ್ಧಪಡಿಸಿದೆವು. ಈಗ ಅವು ಯೆಹೋವನ ವೇದಿಕೆಯ ಮುಂದೆ ಇಡಲ್ಪಟ್ಟಿವೆ” ಎಂದು ಹೇಳಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅರಸನಾದ ಆಹಾಜನು ತನ್ನ ಆಳ್ವಿಕೆಯಲ್ಲಿ ದೈವದ್ರೋಹಿಯಾಗಿ ತಳ್ಳಿಬಿಟ್ಟಿದ್ದ ಪಾತ್ರೆಗಳನ್ನು ತಿರುಗಿ ತಂದಿಟ್ಟು ಪ್ರತಿಷ್ಠಿಸಿದ್ದೇವೆ; ಅವು ಈಗ ಯೆಹೋವನ ಯಜ್ಞವೇದಿಯ ಮುಂದಿರುತ್ತವೆ” ಎಂದರು.
Kannada BSI Bible 2016
ಇದಲ್ಲದೆ ಅರಸನಾದ ಆಹಾಜನು ಆಳಿದಾಗ ತನ್ನ ಅಕೃತ್ಯದಿಂದ ಬಿಸಾಡಿದ ಎಲ್ಲಾ ಸಾಮಾನುಗಳನ್ನು ಸಿದ್ಧ ಮಾಡಿ ಪರಿಶುದ್ಧಮಾಡಿದೆವು; ಇಗೋ, ಅವು ಕರ್ತನ ಬಲಿಪೀಠದ ಮುಂದಿರುತ್ತವೆ ಎಂದು ಹೇಳಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅರಸನಾದ ಆಹಾಜನು ತನ್ನ ಆಳಿಕೆಯಲ್ಲಿ ದೇವದ್ರೋಹಿಯಾಗಿ ತಳ್ಳಿಬಿಟ್ಟ ಪಾತ್ರೆಗಳನ್ನು ತಿರಿಗಿ ತಂದಿಟ್ಟು ಪ್ರತಿಷ್ಠಿಸಿದ್ದೇವೆ; ಅವು ಈಗ ಯೆಹೋವನ ಯಜ್ಞವೇದಿಯ ಮುಂದಿರುತ್ತವೆ ಅಂದರು.
Kannada Bible (KNCL) BSI 2016
ಅರಸ ಅಹಾಜನು, ತನ್ನ ಆಳ್ವಿಕೆಯಲ್ಲಿ ದೇವದ್ರೋಹಿಯಾಗಿ ತಳ್ಳಿಬಿಟ್ಟಿದ್ದ ಪಾತ್ರೆಗಳನ್ನು ಮತ್ತೆ ತಂದು ಇಟ್ಟು ಪ್ರತಿಷ್ಠಿಸಿದ್ದೇವೆ; ಅವು ಈಗ ಸರ್ವೇಶ್ವರನ ಬಲಿಪೀಠದ ಮುಂದಿರುತ್ತವೆ,” ಎಂದು ವರದಿಮಾಡಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಅರಸನಾದ ಆಹಾಜನು ಆಳಿದಾಗ, ದೇವದ್ರೋಹಿಯಾಗಿ ಬಿಸಾಡಿದ ಎಲ್ಲಾ ಸಲಕರಣೆಗಳನ್ನು ಪುನಃ ತಂದು ಪ್ರತಿಷ್ಠೆ ಮಾಡಿದೆವು. ಅವು ಯೆಹೋವ ದೇವರ ಬಲಿಪೀಠದ ಮುಂದೆ ಇವೆ,” ಎಂದು ಹೇಳಿದರು.