2 Chronicles 29:28 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸೇರಿ ಬಂದಿದ್ದ ಜನಸಮೂಹದವರು ಸಾಷ್ಟಾಂಗನಮಸ್ಕಾರ ಮಾಡಿದರು. ಯಜ್ಞವು ಮುಗಿಯುವ ತನಕ ದೇವರ ಸ್ತೋತ್ರಗಾನ ಮುಂದುವರಿಯಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸರ್ವಾಂಗಹೋಮ ಸಮರ್ಪಣೆಯು ಮುಗಿಯುವವರೆಗೆ ಸರ್ವಸಮೂಹದವರು ಸಾಷ್ಟಾಂಗ ನಮಸ್ಕಾರ ಮಾಡುತ್ತಲೂ, ಗಾಯಕರೂ ಗಾನಮಾಡುತ್ತಲೂ, ತುತ್ತೂರಿ ಊದುವವರು ತುತ್ತೂರಿ ಊದುತ್ತಲೂ ಇದ್ದರು.
Kannada BSI Bible 2016
ಆಗ ಸಭೆಯವರೆಲ್ಲರೂ ಆರಾಧಿಸಿದರು. ದಹನಬಲಿ ಅರ್ಪಿಸಿ ತೀರಿಸುವ ಪರ್ಯಂತರ ಹಾಡುಗಾರರು ಹಾಡಿದರು, ತುತೂರಿ ಊದುವವರು ಊದಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸರ್ವಾಂಗಹೋಮ ಸಮರ್ಪಣೆಯು ತೀರುವವರೆಗೆ ಸರ್ವಸಮೂಹದವರು ಸಾಷ್ಟಾಂಗನಮಸ್ಕಾರ ಮಾಡುತ್ತಲೂ ಗಾಯಕರು ಗಾನಮಾಡುತ್ತಲೂ ತುತೂರಿಯೂದುವವರು ತುತೂರಿಯೂದುತ್ತಲೂ ಇದ್ದರು.
Kannada Bible (KNCL) BSI 2016
ದಹನಬಲಿ ಸಮರ್ಪಣೆಯು ಮುಗಿಯುವವರೆಗೆ ಸಭೆಸೇರಿದವರು ಸಾಷ್ಟಾಂಗ ನಮಸ್ಕಾರ ಮಾಡುತ್ತಾ ಇದ್ದರು; ಗಾಯಕರು ಗಾನ ಮಾಡುತ್ತಾ ಇದ್ದರು; ತುತೂರಿ ಊದುವವರು ಊದುತ್ತಾ ಇದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಸಭೆಯವರೆಲ್ಲರೂ ಆರಾಧಿಸಿದರು. ದಹನಬಲಿ ಅರ್ಪಿಸಿ ತೀರಿಸುವ ತನಕ ಹಾಡುಗಾರರು ಹಾಡಿದರು. ತುತೂರಿ ಊದುವವರು ಊದಿದರು.