2 Chronicles 29:35 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆ ದಿವಸ ಎಷ್ಟೋ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಪಾನದ್ರವ್ಯದ ಹೋಮಗಳನ್ನೂ ಸಮರ್ಪಿಸಿದರು. ಹೀಗೆ ದೇವಾಲಯದಲ್ಲಿ ಆರಾಧನೆಯು ಮತ್ತೆ ಪ್ರಾರಂಭವಾಯಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದಲ್ಲದೆ ಯಾಜಕರೂ ಯೆಹೋವನಿಗೆ ಸಮರ್ಪಿಸಬೇಕಾಗಿದ್ದ ಸರ್ವಾಂಗಹೋಮ, ಸಮಾಧಾನ ಯಜ್ಞಗಳ ಕೊಬ್ಬು ಹಾಗು ಸರ್ವಾಂಗಹೋಮ ಸಂಬಂಧವಾದ ಪಾನದ್ರವ್ಯ ಇವು ಅಪಾರವಾಗಿದ್ದವು.
Kannada BSI Bible 2016
ಇದಲ್ಲದೆ ದಹನಬಲಿ ಗಳೂ ಸಮಾಧಾನದ ಬಲಿಗಳ ಕೊಬ್ಬೂ ದಹನ ಬಲಿಗೆ ಬೇಕಾದ ಪಾನದ ಅರ್ಪಣೆಗಳೂ ಬಹಳ ವಾಗಿದ್ದವು. ಹೀಗೆಯೇ ಕರ್ತನ ಆಲಯದ ಸೇವೆಯು ಸಿದ್ಧವಾಯಿತು.ಆಗ ದೇವರು ಜನರನ್ನು ಸಿದ್ಧಮಾಡಿದ್ದರಿಂದ ಹಿಜ್ಕೀಯನೂ ಜನರೆಲ್ಲರೂ ಸಂತೋಷಪಟ್ಟರು; ಯಾಕಂದರೆ ಈ ಕಾರ್ಯವು ಅಕಸ್ಮಾತ್ತಾಗಿ ಆಯಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ತಮ್ಮನ್ನು ಶುದ್ಧಪಡಿಸಿಕೊಳ್ಳುವದರಲ್ಲಿ ಯಾಜಕರಿಗಿಂತ ಲೇವಿಯರೇ ಹೆಚ್ಚು ಶ್ರದ್ಧೆಯುಳ್ಳವರಾಗಿದ್ದರು. ಇದಲ್ಲದೆ ಯಾಜಕರು ಸಮರ್ಪಿಸಬೇಕಾಗಿದ್ದ ಸರ್ವಾಂಗಹೋಮ, ಸಮಾಧಾನಯಜ್ಞಗಳ ಕೊಬ್ಬು, ಸರ್ವಾಂಗಹೋಮ ಸಂಬಂಧವಾದ ಪಾನದ್ರವ್ಯ ಇವು ಅಪಾರವಾಗಿದ್ದವು.
Kannada Bible (KNCL) BSI 2016
ಇದಲ್ಲದೆ, ಯಾಜಕರು ಸಮರ್ಪಿಸಬೇಕಾಗಿದ್ದ ದಹನಬಲಿ, ಶಾಂತಿಸಮಾಧಾನ ಬಲಿಗಳ ಕೊಬ್ಬು ಹಾಗು ದಹನಬಲಿ ಸಂಬಂಧವಾದ ಪಾನದ್ರವ್ಯ ಇವೂ ಅಪಾರವಾಗಿ ಇದ್ದವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ದಹನಬಲಿಗಳೂ, ಸಮಾಧಾನದ ಬಲಿಗಳ ಕೊಬ್ಬೂ, ದಹನಬಲಿಗೆ ಬೇಕಾದ ಪಾನದ ಅರ್ಪಣೆಗಳೂ ಬಹಳವಾಗಿದ್ದವು. ಹೀಗೆ ಯೆಹೋವ ದೇವರ ಆಲಯದ ಸೇವೆಯು ಸಿದ್ಧವಾಯಿತು.