2 Chronicles 29:36 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದೇವರು ಅವುಗಳನ್ನು ತನ್ನ ಜನರಿಗಾಗಿ ಸಿದ್ಧಪಡಿಸಿದ್ದಕ್ಕಾಗಿಯೂ ಅದನ್ನು ಅಲ್ಪಕಾಲಾವಧಿಯಲ್ಲಿ ಮಾಡಿದ್ದಕ್ಕಾಗಿಯೂ ಹಿಜ್ಕೀಯನು ಮತ್ತು ಯೆಹೂದದ ಜನರು ಸಂತೋಷಪಟ್ಟರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೀಗೆ ಯೆಹೋವನ ಆಲಯದ ಸೇವಾಕ್ರಮವು ಪುನಃ ಸ್ಥಾಪಿತವಾಯಿತು. ದೇವರು ತಾನೇ ತನ್ನ ಪ್ರಜೆಗಳಿಗಾಗಿ ಈ ಕಾರ್ಯವನ್ನು ನೆರವೇರಿಸಿದ್ದರಿಂದ, ಹಿಜ್ಕೀಯನೂ ಮತ್ತು ಎಲ್ಲಾ ಜನರೂ ಸಂತೋಷಿಸಿದರು.
Kannada BSI Bible 2016
ಆಗ ದೇವರು ಜನರನ್ನು ಸಿದ್ಧಮಾಡಿದ್ದರಿಂದ ಹಿಜ್ಕೀಯನೂ ಜನರೆಲ್ಲರೂ ಸಂತೋಷಪಟ್ಟರು; ಯಾಕಂದರೆ ಈ ಕಾರ್ಯವು ಅಕಸ್ಮಾತ್ತಾಗಿ ಆಯಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೀಗೆ ಯೆಹೋವನ ಆಲಯದ ಸೇವಾಕ್ರಮವು ಪುನಃಸ್ಥಾಪಿತವಾಯಿತು. ಯಾರೂ ನೆನಸದೆ ಇರುವಲ್ಲಿ ದೇವರು ತಾನೇ ತನ್ನ ಪ್ರಜೆಗಳಿಗೋಸ್ಕರ ಈ ಕಾರ್ಯವನ್ನು ನೆರವೇರಿಸಿದ್ದರಿಂದ ಹಿಜ್ಕೀಯನೂ ಎಲ್ಲಾ ಜನರೂ ಸಂತೋಷಿಸಿದರು.
Kannada Bible (KNCL) BSI 2016
ಹೀಗೆ ಸರ್ವೇಶ್ವರನ ಆಲಯದ ಸೇವಾಕ್ರಮವು ಪುನಃ ಸ್ಥಾಪಿತವಾಯಿತು. ಯಾರೂ ಗಮನಿಸುವುದಕ್ಕೆ ಮುಂಚೆಯೇ, ದೇವರು ತಾವೇ ತಮ್ಮ ಪ್ರಜೆಗಳಿಗಾಗಿ ಈ ಕಾರ್ಯವನ್ನು ನೆರವೇರಿಸಿದ್ದರಿಂದ ಹಿಜ್ಕೀಯನೂ ಎಲ್ಲ ಜನರೂ ಸಂತೋಷಪಟ್ಟರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ದೇವರು ತಮ್ಮ ಜನರನ್ನು ಸಿದ್ಧಮಾಡಿದ್ದರಿಂದ ಹಿಜ್ಕೀಯನೂ, ಜನರೆಲ್ಲರೂ ಸಂತೋಷಪಟ್ಟರು. ಏಕೆಂದರೆ ಈ ಕಾರ್ಯವು ತ್ವರೆಯಾಗಿ ನಡೆಯಿತು.