2 Chronicles 3:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸೊಲೊಮೋನನು ದೇವಾಲಯಕ್ಕೆ ನೀಲ, ಧೂಮ್ರ ಮತ್ತು ಕೆಂಪು ಬಟ್ಟೆ ಮತ್ತು ಬೆಲೆಬಾಳುವ ನಾರುಬಟ್ಟೆಗಳಿಂದ ಪರದೆಗಳನ್ನು ತಯಾರಿಸಿ ಅದರ ಮೇಲೆ ಕೆರೂಬಿಯರ ಚಿತ್ರವನ್ನು ಕಸೂತಿ ಮಾಡಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸೊಲೊಮೋನನು ಪರದೆಯನ್ನು ನೀಲ, ಧೂಮ್ರ, ರಕ್ತವರ್ಣಗಳುಳ್ಳ ನಯವಾದ ನಾರಿನಿಂದ ಮಾಡಿಸಿದನು. ಅದರಲ್ಲಿ ಕೆರೂಬಿಗಳ ಕಸೂತಿಯನ್ನು ಹಾಕಿಸಿದನು.
Kannada BSI Bible 2016
ತೆರೆಯನ್ನು ನೀಲ ಧೂಮ್ರ ರಕ್ತವರ್ಣಗಳಿಂದಲೂ ನಯವಾದ ನಾರಿನ ವಸ್ತ್ರದಿಂದಲೂ ಮಾಡಿಸಿ ಅದರಲ್ಲಿ ಕೆರೂಬಿಗಳನ್ನು ಮಾಡಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸೊಲೊಮೋನನು ಪರದೆಯನ್ನು ನೀಲಧೂಮ್ರರಕ್ತವರ್ಣಗಳುಳ್ಳ ನಾರಿನಿಂದ ಮಾಡಿಸಿದನು. ಅದರಲ್ಲಿ ಕೆರೂಬಿಗಳನ್ನು ಕಸೂತಿ ಹಾಕಿಸಿದನು.
Kannada Bible (KNCL) BSI 2016
ಸೊಲೊಮೋನನು ಪರದೆಯನ್ನು ನೀಲಿ, ಊದಾ, ಕೆಂಪು ವರ್ಣಗಳುಳ್ಳ ನಾರಿನಿಂದ ಮಾಡಿಸಿದನು. ಅದರಲ್ಲಿ ಕೆರೂಬಿಗಳನ್ನು ಕಸೂತಿ ಹಾಕಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪರದೆಯನ್ನು ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ಹೊಸೆದ ನಾರಿನಿಂದ ಮಾಡಿಸಿ, ಅದರಲ್ಲಿ ಕೆರೂಬಿಗಳುಳ್ಳದ್ದನ್ನಾಗಿ ಮಾಡಿಸಿದನು.