2 Chronicles 3:15 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸೊಲೊಮೋನನು ದೇವಾಲಯದ ಎದುರಿನಲ್ಲಿ ಮೂವತ್ತೈದು ಮೊಳ ಎತ್ತರದ ಎರಡು ಕಂಬಗಳನ್ನು ನಿಲ್ಲಿಸಿದನು. ಅದರ ಮೇಲಿನ ಭಾಗ ಐದು ಮೊಳ ಎತ್ತರವಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದಲ್ಲದೆ ದೇವಾಲಯದ ಮುಂದೆ ಎರಡು ಸ್ತಂಭಗಳನ್ನು ನಿಲ್ಲಿಸಿದನು, ಅವು ಮೂವತ್ತೈದು ಮೊಳ (5.5 ಮೀಟರ್) ಎತ್ತರವಾಗಿದ್ದವು. ಅವುಗಳ ತಲೆಗಳ ಮೇಲಣ ಕುಂಭಗಳು ಐದು ಮೊಳ ಎತ್ತರವಾಗಿದ್ದವು.
Kannada BSI Bible 2016
ಇದಲ್ಲದೆ ಅವನು ಆಲಯದ ಮುಂದೆ ಮೂವ ತ್ತೈದು ಮೊಳ ಉದ್ದವಾದ ಎರಡು ಸ್ತಂಭಗಳನ್ನು ಮಾಡಿಸಿದನು; ಒಂದೊಂದರ ತುದಿಯ ಮೇಲೆ ಐದು ಮೊಳ ಉದ್ದ ಬೋದಿಗೆಯನ್ನು ಇಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದಲ್ಲದೆ ದೇವಾಲಯದ ಮುಂದೆ ಎರಡು ಕಂಬಗಳನ್ನು ನಿಲ್ಲಿಸಿದನು. ಅವು ಮೂವತ್ತೈದು ಮೊಳ ಎತ್ತರವಿದ್ದವು. ಅವುಗಳ ತಲೆಗಳ ಮೇಲಣ ಕುಂಭಗಳು ಐದು ಮೊಳ ಎತ್ತರವಿದ್ದವು.
Kannada Bible (KNCL) BSI 2016
ಇದಲ್ಲದೆ ಸೊಲೊಮೋನನು ದೇವಾಲಯದ ಮುಂದೆ ಎರಡು ಕಂಬಗಳನ್ನು ನಿಲ್ಲಿಸಿದನು. ಅವು 5:5 ಮೀಟರ್ ಎತ್ತರ ಇದ್ದವು. ಅವುಗಳ ತಲೆಗಳ ಮೇಲಣ ಕುಂಭಗಳು 2:2 ಮೀಟರ್ ಎತ್ತರವಿದ್ದವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಅವನು ಕಟ್ಟಡದ ಪ್ರವೇಶದ್ವಾರದಲ್ಲಿ ಎರಡು ಸ್ತಂಭಗಳನ್ನು ನಿರ್ಮಿಸಿದನು, ಪ್ರತಿಯೊಂದೂ ಹದಿನೈದು ಮೀಟರ್ ಎಪ್ಪತ್ತೈದು ಸೆಂಟಿಮೀಟರ್ ಎತ್ತರ, ಪ್ರತಿಯೊಂದರ ಮೇಲೆಯೂ ನಿರ್ಮಿಸಲಾದ ಪ್ರತಿಯೊಂದು ತಲೆಗಳು ಎರಡೂವರೆ ಮೀಟರ್ ಉದ್ದವಿತ್ತು.