2 Chronicles 30:17 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಜನಸಮೂಹದವರಲ್ಲಿ ಎಷ್ಟೋ ಮಂದಿ ಪವಿತ್ರ ಸೇವೆಗಾಗಿ ತಮ್ಮನ್ನು ಸಿದ್ಧಮಾಡಿಕೊಂಡಿರಲಿಲ್ಲ. ಆದ್ದರಿಂದ ಪಸ್ಕದ ಕುರಿಯನ್ನು ಅವರು ವಧಿಸಲಾಗಲಿಲ್ಲ. ಲೇವಿಯರೇ ಅವರ ಬದಲಾಗಿ ಪಸ್ಕದ ಕುರಿಯನ್ನು ವಧಿಸಿದರು. ಹೀಗೆ ಲೇವಿಯರು ಪ್ರತಿಯೊಂದು ಕುರಿಯನ್ನು ದೇವರಿಗಾಗಿ ಪರಿಶುದ್ಧಗೊಳಿಸಿ ಸಮರ್ಪಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸಮೂಹದಲ್ಲಿ ಅನೇಕರು ತಮ್ಮನ್ನು ಶುದ್ಧಿಪಡಿಸಿಕೊಳ್ಳದೆ ಇದ್ದುದರಿಂದ ಅಶುದ್ಧರಾದವರೆಲ್ಲರ, ಪಸ್ಕಹಬ್ಬದ ಯಜ್ಞಪಶುಗಳು ಯೆಹೋವನಿಗೆ ಮೀಸಲಾಗುವಂತೆ ಅವುಗಳನ್ನು ಲೇವಿಯರೇ ವಧಿಸಿದರು.
Kannada BSI Bible 2016
ಯಾಕಂದರೆ ಸಭೆಯಲ್ಲಿ ಅನೇಕರು ಅಪರಿಶುದ್ಧರಾಗಿದ್ದರು, ಲೇವಿಯರು ಅಶುದ್ಧರಾದ ಎಲ್ಲರ ನಿಮಿತ್ತ ಅವರನ್ನು ಕರ್ತನಿಗೆ ಪರಿಶುದ್ಧ ಮಾಡುವ ಹಾಗೆ ಪಸ್ಕದ ಬಲಿಗಳನ್ನು ವಧಿಸುವದಕ್ಕೆ ಇದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯಾಜಕರು ಲೇವಿಯರ ಕೈಯಿಂದ ರಕ್ತವನ್ನು ತೆಗೆದುಕೊಂಡು ಅದನ್ನು ಪ್ರೋಕ್ಷಿಸಿದರು. ಸಮೂಹದಲ್ಲಿ ಅನೇಕರು ತಮ್ಮನ್ನು ಶುದ್ಧಿಪಡಿಸಿಕೊಳ್ಳದೆ ಇದ್ದದರಿಂದ ಅಶುದ್ಧರಾದವರೆಲ್ಲರ ಯಜ್ಞಪಶುಗಳು ಯೆಹೋವನಿಗೆ ಮೀಸಲಾಗುವಂತೆ ಅವುಗಳನ್ನು ಲೇವಿಯರೇ ವಧಿಸಿದರು.
Kannada Bible (KNCL) BSI 2016
ಜನಸಮೂಹದಲ್ಲಿ ಅನೇಕರು ತಮ್ಮನ್ನು ಶುದ್ಧಪಡಿಸಿಕೊಳ್ಳದೆ ಇದ್ದುದರಿಂದ, ಅಶುದ್ಧರಾಗಿದ್ದವರೆಲ್ಲರ ಬಲಿಪಶುಗಳು ಸರ್ವೇಶ್ವರನಿಗೆ ಮೀಸಲಾಗುವಂತೆ ಅವುಗಳನ್ನು ಲೇವಿಯರೇ ವಧಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಜನರಲ್ಲಿ ಅನೇಕರು ಅಪರಿಶುದ್ಧರಾಗಿದ್ದರು. ಆದ್ದರಿಂದ ಲೇವಿಯರು ಅಶುದ್ಧರಾದ ಎಲ್ಲರ ನಿಮಿತ್ತ ಅವರನ್ನು ಯೆಹೋವ ದೇವರಿಗೆ ಪ್ರತಿಷ್ಠೆ ಮಾಡುವ ಹಾಗೆ ಪಸ್ಕದ ಬಲಿಗಳನ್ನು ವಧಿಸುವುದಕ್ಕೆ ಇದ್ದರು.