2 Chronicles 30:26 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಜೆರುಸಲೇಮಿನಲ್ಲಿ ಸಂತಸವು ತುಂಬಿತ್ತು. ಸೊಲೊಮೋನ್ ಅರಸನ ಸಮಯದಿಂದ ಅಂದಿನ ತನಕ ಅಂಥಾ ಹಬ್ಬವು ಆಚರಿಸಲ್ಪಟ್ಟಿರಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದಾವೀದನ ಮಗನೂ ಇಸ್ರಾಯೇಲರ ಅರಸನೂ ಆದ ಸೊಲೊಮೋನನ ಕಾಲದಿಂದ ಯೆರೂಸಲೇಮಿನಲ್ಲಿ ಅಂಥ ಉತ್ಸವವು ನಡೆದಿರಲಿಲ್ಲವಾದುದರಿಂದ ಯೆರೂಸಲೇಮಿನಲ್ಲಿ ಮಹಾಸಂತೋಷವುಂಟಾಯಿತು.
Kannada BSI Bible 2016
ಇಸ್ರಾ ಯೇಲಿನ ಅರಸನಾಗಿರುವ ದಾವೀದನ ಮಗನಾದ ಸೊಲೊಮೋನನ ಕಾಲ ಮೊದಲುಗೊಂಡು ಯೆರೂ ಸಲೇಮಿನಲ್ಲಿ ಇದರ ಹಾಗೆ ನಡೆದಿರಲಿಲ್ಲವಾದದ ರಿಂದ ಹೀಗೆಯೇ ಯೆರೂಸಲೇಮಿನಲ್ಲಿ ಮಹಾ ಸಂತೋಷ ಉಂಟಾಗಿತ್ತು.ಆಗ ಲೇವಿಯರಾದ ಯಾಜಕರೂ ಎದ್ದು ಜನರನ್ನು ಆಶೀರ್ವದಿಸಿದರು. ಅವರ ಶಬ್ದವು ಕೇಳಲ್ಪಟ್ಟಿತು. ಅವರ ಪ್ರಾರ್ಥನೆಯು ಆತನ ಪರಿಶುದ್ಧವಾದ ನಿವಾಸಸ್ಥಾನಕ್ಕೆ ಅಂದರೆ ಪರಲೋಕಕ್ಕೆ ಮುಟ್ಟಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ದಾವೀದನ ಮಗನೂ ಇಸ್ರಾಯೇಲ್ಯರ ಅರಸನೂ ಆದ ಸೊಲೊಮೋನನ ಕಾಲದಿಂದ ಯೆರೂಸಲೇವಿುನಲ್ಲಿ ಅಂಥ ಉತ್ಸವವು ನಡೆದಿರಲಿಲ್ಲವಾದದರಿಂದ ಯೆರೂಸಲೇವಿುನಲ್ಲಿ ಬಹುಸಂತೋಷವುಂಟಾಯಿತು.
Kannada Bible (KNCL) BSI 2016
ದಾವೀದನ ಮಗನೂ ಇಸ್ರಯೇಲರ ಅರಸನೂ ಆದ ಸೊಲೊಮೋನನ ಕಾಲದಿಂದ ಜೆರುಸಲೇಮಿನಲ್ಲಿ ಅಂಥ ಉತ್ಸವ ನಡೆದಿರಲಿಲ್ಲ. ಆದುದರಿಂದ ಜೆರುಸಲೇಮಿನಲ್ಲಿ ಹೇಳತೀರದ ಆನಂದವಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹೀಗೆಯೇ ಯೆರೂಸಲೇಮಿನಲ್ಲಿ ಮಹಾ ಸಂತೋಷ ಉಂಟಾಗಿತ್ತು. ಇಸ್ರಾಯೇಲಿನ ಅರಸನಾದ ದಾವೀದನ ಮಗ ಸೊಲೊಮೋನನ ಕಾಲದಿಂದ ಯೆರೂಸಲೇಮಿನಲ್ಲಿ ಅಂಥಾ ಆಚರಣೆಯು ನಡೆದಿರಲಿಲ್ಲ.