2 Chronicles 30:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೀವು ಯೆಹೋವನಿಗೆ ವಿಧೇಯರಾದರೆ ನಿಮ್ಮ ಮಕ್ಕಳೂ ಬಂಧುಗಳೂ ತಮ್ಮನ್ನು ಸೆರೆಹಿಡಿದವರಿಂದ ಕರುಣೆಯನ್ನು ಹೊಂದಿ ಮತ್ತೆ ಈ ದೇಶಕ್ಕೆ ಬರುವರು. ದೇವರಾದ ಯೆಹೋವನು ದಯೆಯೂ ಕರುಣೆಯೂ ಉಳ್ಳವನಾಗಿದ್ದಾನೆ. ನೀವು ಆತನ ಕಡೆಗೆ ತಿರುಗಿದರೆ ಆತನು ನಿಮ್ಮನ್ನು ತಳ್ಳಿಬಿಡುವುದಿಲ್ಲ.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀವು ಯೆಹೋವನ ಕಡೆಗೆ ತಿರುಗಿಕೊಳ್ಳವುದಾದರೆ ನಿಮ್ಮ ಸಹೋದರರೂ, ಮಕ್ಕಳೂ ತಮ್ಮನ್ನು ಸೆರೆ ಒಯ್ದವರ ದೃಷ್ಟಿಯಲ್ಲಿ ದಯೆಗೆ ಪಾತ್ರರಾಗಿ, ತಿರುಗಿ ಸ್ವದೇಶಕ್ಕೆ ಬರುವರು. ನಿಮ್ಮ ದೇವರಾದ ಯೆಹೋವನು ದಯೆಯೂ, ಕನಿಕರವೂ ಉಳ್ಳವನಾಗಿದ್ದಾನೆ. ಆತನು ತನ್ನ ಕಡೆಗೆ ತಿರುಗಿಕೊಳ್ಳುವ ನಿಮ್ಮನ್ನು ಕಟಾಕ್ಷಿಸದೆ ಇರುವುದಿಲ್ಲ.”
Kannada BSI Bible 2016
ನೀವು ಕರ್ತನ ಕಡೆಗೆ ತಿರುಗಿದರೆ ನಿಮ್ಮ ಸಹೋದ ರರೂ ನಿಮ್ಮ ಮಕ್ಕಳೂ ತಿರಿಗಿ ಈ ದೇಶಕ್ಕೆ ಬರುವ ಹಾಗೆ ತಮ್ಮನ್ನು ಸೆರೆಯಾಗಿ ಒಯ್ದವರ ಸಮ್ಮುಖದಲ್ಲಿ ಕರುಣೆಯನ್ನು ಹೊಂದುವರು. ನಿಮ್ಮ ದೇವರಾದ ಕರ್ತನು ಕೃಪೆಯೂ ಕರುಣೆಯೂ ಉಳ್ಳವನಾಗಿದ್ದಾನೆ, ನೀವು ಆತನ ಕಡೆಗೆ ತಿರುಗಿದರೆ ಆತನು ನಿಮ್ಮ ಕಡೆ ಯಿಂದ ತನ್ನ ಮುಖ ತೊಲಗಿಸನು ಎಂದು ಹೇಳಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀವು ಯೆಹೋವನ ಕಡೆಗೆ ತಿರುಗಿಕೊಳ್ಳುವದಾದರೆ ನಿಮ್ಮ ಸಹೋದರರೂ ಮಕ್ಕಳೂ ತಮ್ಮನ್ನು ಸೆರೆಯೊಯ್ದವರ ದೃಷ್ಟಿಯಲ್ಲಿ ದಯೆಗೆ ಪಾತ್ರರಾಗಿ ತಿರಿಗಿ ಸ್ವದೇಶಕ್ಕೆ ಬರುವರು. ನಿಮ್ಮ ದೇವರಾದ ಯೆಹೋವನು ದಯೆಯೂ ಕನಿಕರವೂ ಉಳ್ಳವನಾಗಿರುತ್ತಾನೆ. ಆತನು ತನ್ನ ಕಡೆಗೆ ತಿರುಗಿಕೊಳ್ಳುವ ನಿಮ್ಮನ್ನು ಕಟಾಕ್ಷಿಸದೆ ಇರುವದಿಲ್ಲ ಎಂಬದೇ.
Kannada Bible (KNCL) BSI 2016
ನೀವು ಸರ್ವೇಶ್ವರನಿಗೆ ಅಭಿಮುಖರಾದರೆ, ನಿಮ್ಮ ಸಹೋದರರೂ ಮಕ್ಕಳೂ ತಮ್ಮನ್ನು ಸೆರೆಯೊಯ್ದವರ ದೃಷ್ಟಿಯಲ್ಲಿ ದಯೆಗೆ ಪಾತ್ರರಾಗಿ, ಮರಳಿ ಸ್ವದೇಶಕ್ಕೆ ಬರುವರು. ನಿಮ್ಮ ದೇವರಾದ ಸರ್ವೇಶ್ವರ ದಯಾವಂತರು, ಕನಿಕರವುಳ್ಳವರು. ತಮಗೆ ಅಭಿಮುಖರಾಗುವ ನಿಮ್ಮನ್ನು ಕಟಾಕ್ಷಿಸದೆ ಇರುವುದಿಲ್ಲ.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀವು ಯೆಹೋವ ದೇವರ ಕಡೆಗೆ ತಿರುಗಿ ಈ ದೇಶಕ್ಕೆ ಬರುವಂತೆ ತಮ್ಮನ್ನು ಸೆರೆಯಾಗಿ ಒಯ್ದವರ ಸಮ್ಮುಖದಲ್ಲಿ ಅನುಕಂಪವನ್ನು ಹೊಂದುವರು. ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ಕೃಪೆಯೂ ಅನುಕಂಪವೂ ಉಳ್ಳವರಾಗಿದ್ದಾರೆ. ನೀವು ಅವರ ಕಡೆಗೆ ತಿರುಗಿದರೆ, ಅವರು ನಿಮ್ಮ ಕಡೆಯಿಂದ ತಮ್ಮ ಮುಖವನ್ನು ತಿರುಗಿಸುವುದಿಲ್ಲ,” ಎಂದು ಹೇಳಿದರು.