2 Chronicles 31:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆ ಬಳಿಕ ದೇವರಿಗೆ ಕೊಟ್ಟಿದ್ದ ದಶಮಾಂಶ ಮತ್ತು ಬೇರೆ ಕಾಣಿಕೆಗಳನ್ನು ಆ ಉಗ್ರಾಣದ ಕೋಣೆಗಳಲ್ಲಿ ಕೂಡಿಸಿಟ್ಟರು. ಲೇವಿಯನಾದ ಕೋನನ್ಯನು ಇದರ ಮೇಲ್ವಿಚಾರಕನಾಗಿ ನೇಮಿಸಲ್ಪಟ್ಟನು. ಇವನಿಗೆ ಸಹಾಯಕನಾಗಿ ಕೋನನ್ಯನ ಸೋದರನಾದ ಶಿಮ್ಮಿಯು ನೇಮಿಸಲ್ಪಟ್ಟನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವು ಸಿದ್ಧವಾದ ಮೇಲೆ ಜನರು ಕಾಣಿಕೆಗಳನ್ನೂ, ತಮ್ಮ ಆದಾಯದ ದಶಮಾಂಶವನ್ನೂ ಹಾಗು ದೇವರ ನೈವೇದ್ಯಕ್ಕಾಗಿ ಮುಡುಪಾಗಿ ಇಟ್ಟಿದ್ದನ್ನು ನಂಬಿಕೆಯಿಂದ ತಂದು ಅವುಗಳಲ್ಲಿ ಹಾಕುತ್ತಿದ್ದರು. ಈ ಎಲ್ಲಾ ಉಗ್ರಾಣಗಳ ಮೇಲ್ವಿಚಾರಣೆಗೆ ಲೇವಿಯನಾದ ಕೋನನ್ಯನು ಮುಖ್ಯಸ್ಥನಾಗಿದ್ದನು. ಅವನ ತಮ್ಮನಾದ ಶಿಮ್ಮಿಯು ದ್ವಿತೀಯ ಸ್ಥಾನದವನಾಗಿದ್ದನು.
Kannada BSI Bible 2016
ಅವರು ಅವುಗಳನ್ನು ಸಿದ್ಧಮಾಡಿದ ಮೇಲೆ ಕಾಣಿಕೆಗಳನ್ನೂ ದಶಮಾಂಶ ವನ್ನೂ ಪ್ರತಿಷ್ಠಿಸಲ್ಪಟ್ಟವುಗಳನ್ನೂ ನಂಬಿಕೆಯಾಗಿ ಒಳಗೆ ತಂದರು. ಇವುಗಳ ಮೇಲೆ ಲೇವಿಯನಾದ ಕೋನನ್ಯನು ಅಧಿಕಾರಿಯಾಗಿದ್ದನು. ಅವನ ತರು ವಾಯ ಸಹೋದರನಾದ ಶಿಮ್ಮಿಯು ಅಧಿಕಾರಿಯಾಗಿ ದ್ದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಜನರು ಕಾಣಿಕೆಗಳನ್ನೂ ತಮ್ಮ ಆದಾಯದ ದಶಮಾಂಶವನ್ನೂ ದೇವರಿಗೋಸ್ಕರ ಪ್ರತ್ಯೇಕಿಸಿದ ಮುಡುಪನ್ನೂ ನಿರ್ವಂಚನೆಯಿಂದ ತಂದು ಅವುಗಳಲ್ಲಿ ಹಾಕುತ್ತಿದ್ದರು. ಈ ಎಲ್ಲಾ ಉಗ್ರಾಣಗಳ ಮೇಲ್ವಿಚಾರಣೆಯಲ್ಲಿ ಲೇವಿಯನಾದ ಕೋನನ್ಯನು ಮುಖ್ಯಸ್ಥನು; ಅವನ ತಮ್ಮನಾದ ಶಿಮ್ಮಿಯು ದ್ವಿತೀಯ ಸ್ಥಾನದವನು.
Kannada Bible (KNCL) BSI 2016
ಅವು ಸಿದ್ಧವಾದ ಮೇಲೆ ಜನರು ಕಾಣಿಕೆಗಳನ್ನು, ತಮ್ಮ ಆದಾಯದ ದಶಮಾಂಶವನ್ನು ಹಾಗು ದೇವರಿಗೆ ಮುಡುಪಾಗಿ ಇಟ್ಟಿದ್ದನ್ನು ನಿರ್ವಂಚನೆಯಿಂದ ತಂದು ಅವುಗಳಲ್ಲಿ ಹಾಕುತ್ತಿದ್ದರು. ಈ ಎಲ್ಲಾ ಉಗ್ರಾಣಗಳ ಮೇಲ್ವಿಚಾರಣೆಯಲ್ಲಿ ಲೇವಿಯನಾದ ಕೋನನ್ಯನು ಮುಖ್ಯಸ್ಥನಾಗಿದ್ದನು; ಅವನ ತಮ್ಮ ಶಿಮ್ಮಿಯು ದ್ವಿತೀಯ ಸ್ಥಾನದವನಾಗಿದ್ದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವು ಸಿದ್ಧವಾದ ಮೇಲೆ ಜನರು ಕಾಣಿಕೆಗಳನ್ನು ತಮ್ಮ ಆದಾಯದ ದಶಮಾಂಶವನ್ನು ಹಾಗು ದೇವರಿಗೆ ಮುಡುಪಾಗಿ ಇಟ್ಟಿದ್ದನ್ನು ನಿರ್ವಂಚನೆಯಿಂದ ತಂದು, ಅವುಗಳಲ್ಲಿ ಹಾಕುತ್ತಿದ್ದರು. ಈ ಎಲ್ಲಾ ಉಗ್ರಾಣಗಳ ಮೇಲ್ವಿಚಾರಣೆಯಲ್ಲಿ ಲೇವಿಯನಾದ ಕೋನನ್ಯನು ಮುಖ್ಯಸ್ಥನಾಗಿದ್ದನು. ಅವನ ತಮ್ಮ ಶಿಮ್ಮಿಯು ದ್ವಿತೀಯ ಸ್ಥಾನದವನಾಗಿದ್ದನು.