2 Chronicles 31:17 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಒಟ್ಟುಗೂಡಿಸಿದ ಕಾಣಿಕೆಯಲ್ಲಿ ಯಾಜಕರೂ ತಮ್ಮ ಪಾಲನ್ನು ತೆಗೆದುಕೊಂಡರು. ಇದನ್ನು ವಂಶಾವಳಿಗನುಸಾರವಾಗಿ ಮಾಡಲಾಯಿತು. ಲೇವಿಯರಲ್ಲಿ ಇಪ್ಪತ್ತು ವರ್ಷದವರೂ ಅದಕ್ಕಿಂತ ಹೆಚ್ಚು ವಯಸ್ಸಾದವರೂ ತಮ್ಮ ಪಾಲನ್ನು ಜವಾಬ್ದಾರಿಗಳಿಗನುಸಾರವಾಗಿಯೂ ತಮ್ಮ ಗುಂಪುಗಳಿಗನುಸಾರವಾಗಿಯೂ ಪಡೆದುಕೊಂಡರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಪಟ್ಟಿಯಲ್ಲಿ ಗೋತ್ರಗಳಿಗೆ ಅನುಸಾರವಾಗಿಯೂ ಆಯಾ ಉದ್ಯೋಗ ವರ್ಗಗಳಿಗೆ ಅನುಸಾರವಾಗಿಯೂ ಇಪ್ಪತ್ತು ವರ್ಷಕ್ಕಿಂತ ಹೆಚ್ಚು ವಯಸ್ಸುಳ್ಳ ಯಾಜಕರು, ಲೇವಿಯರು,
Kannada BSI Bible 2016
ಹಾಗೆಯೇ ಇಪ್ಪತ್ತು ವರುಷ ಪ್ರಾಯ ಮೊದಲು ಗೊಂಡು ಅವರ ತಂದೆಗಳ ಮನೆಯ ಹಾಗೆ ಬರೆಯ ಲ್ಪಟ್ಟ ಅವರವರ ಕೆಲಸಗಳಲ್ಲಿಯೂ ಅವರವರ ಸರತಿ ಗಳಲ್ಲಿಯೂ ಇರುವ ಯಾಜಕರಿಗೂ ಲೇವಿಯ ರಿಗೂ
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಪಟ್ಟಿಯಲ್ಲಿ ಗೋತ್ರಗಳಿಗನುಸಾರವಾಗಿಯೂ ಆಯಾ ಉದ್ಯೋಗವರ್ಗಗಳಿಗನುಸಾರವಾಗಿಯೂ ಇಪ್ಪತ್ತು ವರುಷ ಮೊದಲುಗೊಂಡು ಹೆಚ್ಚು ವಯಸ್ಸುಳ್ಳ ಯಾಜಕರು,
Kannada Bible (KNCL) BSI 2016
ಆ ಪಟ್ಟಿಯಲ್ಲಿ ಗೋತ್ರಗಳಿಗನುಸಾರ ಹಾಗು ಆಯಾ ಉದ್ಯೋಗ ವರ್ಗಗಳಿಗನುಸಾರ ಇಪ್ಪತ್ತು ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳ ಯಾಜಕರು, ಲೇವಿಯರು,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹಾಗೆಯೇ ಇಪ್ಪತ್ತು ವರ್ಷ ಪ್ರಾಯ ಮೊದಲ್ಗೊಂಡು ವಂಶಾವಳಿಯ ದಾಖಲೆಯ ಪ್ರಕಾರ ಅವರವರ ಕೆಲಸಗಳಲ್ಲಿಯೂ, ಅವರವರ ಸರತಿಗಳಲ್ಲಿಯೂ ಇರುವ ಯಾಜಕರಿಗೂ, ಲೇವಿಯರಿಗೂ ಅವರ ಸಮಸ್ತ ಕೂಟದಲ್ಲಿ ವಂಶಾವಳಿಯ ದಾಖಲೆಯ ಪ್ರಕಾರ