2 Chronicles 31:21 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಹಿಜ್ಕೀಯನು ತಾನು ಪ್ರಾರಂಭಿಸಿದ ಪ್ರತಿಯೊಂದು ಕಾರ್ಯಗಳನ್ನೂ ದೇವಾಲಯದ ಕಾರ್ಯಗಳನ್ನೂ ದೇವರ ಕಟ್ಟಳೆಗಳನ್ನೂ ಅನುಸರಿಸುವದನ್ನು ಪೂರ್ಣಹೃದಯದಿಂದ ಮಾಡಿ ಯಶಸ್ವಿಯಾದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ತನ್ನ ದೇವರ ಒಲುಮೆಯನ್ನು ಪಡೆದುಕೊಳ್ಳುವುದಕ್ಕಾಗಿ ದೇವಾಲಯದ ಸೇವೆ ಮಾಡುವ, ಕಾರ್ಯದಲ್ಲಿಯೂ ಧರ್ಮಶಾಸ್ತ್ರವಿಧಿಗಳ ಸಂಬಂಧದಲ್ಲಿಯೂ, ತಾನು ಪ್ರಾರಂಭಿಸಿದ ಎಲ್ಲಾ ಕಾರ್ಯಗಳನ್ನು ಯಥಾರ್ಥಚಿತ್ತದಿಂದಲೂ ಪ್ರಾಮಾಣಿಕನಾಗಿಯೂ ನಡೆದುಕೊಂಡು ಕೃತಾರ್ಥನಾದನು.
Kannada BSI Bible 2016
ಇದಲ್ಲದೆ ದೇವರ ಆಲಯದ ಸೇವೆಯ ಲ್ಲಿಯೂ ನ್ಯಾಯಪ್ರಮಾಣದಲ್ಲಿಯೂ ಆಜ್ಞೆಗಳಲ್ಲಿಯೂ ತನ್ನ ದೇವರನ್ನು ಹುಡುಕಲು ಆರಂಭಿಸಿದ ಸಮಸ್ತ ಕಾರ್ಯಗಳಲ್ಲಿ ಅವನು ತನ್ನ ಪೂರ್ಣಹೃದಯದಿಂದ ಮಾಡಿ ವೃದ್ಧಿಹೊಂದಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ತನ್ನ ದೇವರ ಒಲುಮೆಯನ್ನು ಪಡಕೊಳ್ಳುವದಕ್ಕೋಸ್ಕರ ದೇವಾಲಯದ ಸೇವಾಸಂಬಂಧದಲ್ಲಿಯೂ ಧರ್ಮಶಾಸ್ತ್ರವಿಧಿಗಳ ಸಂಬಂಧದಲ್ಲಿಯೂ ತಾನು ಪ್ರಾರಂಭಿಸಿದ ಎಲ್ಲಾ ಕಾರ್ಯಗಳನ್ನು ಯಥಾರ್ಥಚಿತ್ತದಿಂದ ಮಾಡಿ ಕೊನೆಗಾಣಿಸಿದನು.
Kannada Bible (KNCL) BSI 2016
ದೇವಾಲಯದ ಸೇವಾಸಂಬಂಧದಲ್ಲೂ ಧರ್ಮಶಾಸ್ತ್ರವಿಧಿಗಳ ಸಂಬಂಧದಲ್ಲೂ ತಾನು ಪ್ರಾರಂಭಿಸಿದ ಎಲ್ಲಾ ಕಾರ್ಯಗಳನ್ನು ಯಥಾರ್ಥಚಿತ್ತದಿಂದ ಮಾಡಿ ಮುಗಿಸಿ, ತನ್ನ ದೇವರ ಒಲುಮೆಯನ್ನು ಗಳಿಸಿಕೊಂಡನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ದೇವರ ಆಲಯದ ಸೇವೆಯಲ್ಲಿಯೂ, ಮೋಶೆಯ ನಿಯಮದಲ್ಲಿಯೂ, ದೇವರ ಆಜ್ಞೆಗಳಲ್ಲಿಯೂ ಅವನು ತನ್ನ ದೇವರನ್ನು ಹುಡುಕಲು ಆರಂಭಿಸಿದ ಸಮಸ್ತ ಕಾರ್ಯಗಳನ್ನು ತನ್ನ ಪೂರ್ಣಹೃದಯದಿಂದ ಮಾಡಿ, ಅವನು ಅಭಿವೃದ್ಧಿ ಹೊಂದಿದನು.