2 Chronicles 32:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಹಿಜ್ಕೀಯನು ತಾನೇ ಪೂಜಾಸ್ಥಳಗಳನ್ನೂ ವೇದಿಕೆಗಳನ್ನೂ ತೆಗೆದುಹಾಕಿದ್ದಾನೆ. ಒಂದೇ ಒಂದು ಧೂಪವೇದಿಕೆಯಲ್ಲಿ ಧೂಪಹಾಕಿ ಆರಾಧಿಸಬೇಕೆಂದು ಅವನು ಯೆಹೂದ ಮತ್ತು ಜೆರುಸಲೇಮಿನ ಜನರಾದ ನಿಮಗೆ ಹೇಳುತ್ತಿದ್ದಾನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹಿಜ್ಕೀಯನು ಒಂದೇ ಯಜ್ಞವೇದಿಯ ಮುಂದೆ ಆರಾಧನೆ ಮಾಡಿ ಅದರ ಮೇಲೆಯೇ ಧೂಪಹಾಕಬೇಕೆಂಬುದಾಗಿ ಯೆಹೂದ್ಯರಿಗೂ, ಯೆರೂಸಲೇಮಿನವರಿಗೂ ಆಜ್ಞಾಪಿಸಿ, ದೇವರ ಬೇರೆ ಎಲ್ಲಾ ಪೂಜಾಸ್ಥಳಗಳನ್ನೂ ಯಜ್ಞವೇದಿಗಳನ್ನೂ ಕೆಡವಿಸಿ ಬಿಟ್ಟನಲ್ಲವೆ?
Kannada BSI Bible 2016
ಈ ಹಿಜ್ಕೀಯನು ಉನ್ನತ ಸ್ಥಳಗಳನ್ನೂ ಬಲಿಪೀಠಗಳನ್ನೂ ತೆಗೆದುಹಾಕಿ ಯೆಹೂದದವರಿಗೂ ಯೆರೂಸಲೇಮಿ ನವರಿಗೂ--ನೀವು ಒಂದೇ ಬಲಿಪೀಠದ ಮುಂದೆ ಅಡ್ಡಬಿದ್ದು ಅದರ ಮೇಲೆ ಧೂಪವನ್ನರ್ಪಿಸಬೇಕೆಂದು ಹೇಳಿದ್ದಾನಲ್ಲವೇ?
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಹಿಜ್ಕೀಯನು ಒಂದೇ ಯಜ್ಞವೇದಿಯ ಮುಂದೆ ಆರಾಧನೆಮಾಡಿ ಅದರ ಮೇಲೆಯೇ ಧೂಪಹಾಕಬೇಕೆಂಬದಾಗಿ ಯೆಹೂದ್ಯರಿಗೂ ಯೆರೂಸಲೇವಿುನವರಿಗೂ ಆಜ್ಞಾಪಿಸಿ ಆತನ ಪೂಜಾಸ್ಥಳಗಳನ್ನೂ ಯಜ್ಞವೇದಿಗಳನ್ನೂ ಹಾಳುಮಾಡಿದನಲ್ಲಾ!
Kannada Bible (KNCL) BSI 2016
ಹಿಜ್ಕೀಯನು ಒಂದೇ ಬಲಿಪೀಠದ ಮುಂದೆ ಆರಾಧನೆಮಾಡಿ ಅದರ ಮೇಲೆಯೇ ಧೂಪಹಾಕಬೇಕೆಂಬುದಾಗಿ ಯೆಹೂದ್ಯರಿಗೂ ಜೆರುಸಲೇಮಿಗೂ ಆಜ್ಞಾಪಿಸಿ, ದೇವರ ಬೇರೆ ಎಲ್ಲ ಪೂಜಾಸ್ಥಳಗಳನ್ನೂ ಯಜ್ಞವೇದಿಗಳನ್ನೂ ಹಾಳುಮಾಡಿದನು ಅಲ್ಲವೆ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈ ಹಿಜ್ಕೀಯನು ಅವನ ಪೂಜಾಸ್ಥಳಗಳನ್ನೂ, ಬಲಿಪೀಠಗಳನ್ನೂ ತೆಗೆದುಹಾಕಿ ಯೆಹೂದ್ಯರಿಗೆ ಮತ್ತು ಯೆರೂಸಲೇಮಿನವರಿಗೆ, ‘ನೀವು ಒಂದೇ ಬಲಿಪೀಠದ ಮುಂದೆ ಅಡ್ಡಬಿದ್ದು, ಅದರ ಮೇಲೆ ಧೂಪವನ್ನರ್ಪಿಸಬೇಕು,’ ಎಂದು ಹೇಳಿದ್ದಾನಲ್ಲವೇ?