2 Chronicles 33:13 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೋವನು ಮನಸ್ಸೆಯ ಬೇಡಿಕೆಗಳನ್ನು ಕೇಳಿ ಅವನಿಗೆ ಕರುಣೆ ತೋರಿದನು. ಅವನು ಜೆರುಸಲೇಮಿಗೂ ತನ್ನ ಸಿಂಹಾಸನಕ್ಕೂ ಹಿಂತಿರುಗಿ ಬರುವಂತೆ ಮಾಡಿದನು. ಆಗ ಮನಸ್ಸೆಯು ಯೆಹೋವನೇ ನಿಜ ದೇವರೆಂದು ಅರಿತನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆತನು ಲಾಲಿಸಿ, ಅವನಿಗೆ ಸದುತ್ತರವನ್ನು ದಯಪಾಲಿಸಿ ಅವನನ್ನು ತಿರುಗಿ ಯೆರೂಸಲೇಮಿಗೆ ಬರಮಾಡಿ ಅರಸುತನವನ್ನು ಕೊಟ್ಟನು. ಆಗ ಯೆಹೋವನೇ ದೇವರೆಂಬುದು ಮನಸ್ಸೆಗೆ ಮನದಟ್ಟಾಯಿತು.
Kannada BSI Bible 2016
ಆಗ ಆತನು ಕನಿಕರಪಟ್ಟು ಅವನ ಬಿನ್ನಹವನ್ನು ಕೇಳಿ ಯೆರೂಸ ಲೇಮಿಗೆ ತನ್ನ ರಾಜ್ಯಕ್ಕೆ ಅವನನ್ನು ತಿರಿಗಿ ಬರಮಾಡಿ ದನು. ಆಗ ಕರ್ತನೇ ದೇವರೆಂದು ಮನಸ್ಸೆಯು ತಿಳಿದುಕೊಂಡನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆತನು ಲಾಲಿಸಿ ಅವನಿಗೆ ಸದುತ್ತರವನ್ನು ದಯಪಾಲಿಸಿ ಅವನನ್ನು ತಿರಿಗಿ ಯೆರೂಸಲೇವಿುಗೆ ಬರಮಾಡಿ ಅರಸುತನವನ್ನು ಕೊಟ್ಟನು. ಆಗ ಯೆಹೋವನೇ ದೇವರೆಂಬದು ಮನಸ್ಸೆಗೆ ಮಂದಟ್ಟಾಯಿತು.
Kannada Bible (KNCL) BSI 2016
ಅವರು ಆಲಿಸಿ, ಅವನಿಗೆ ಸದುತ್ತರವನ್ನು ದಯಪಾಲಿಸಿದರು. ಅವನನ್ನು ಮರಳಿ ಜೆರುಸಲೇಮಿಗೆ ಬರಮಾಡಿ ಅರಸುತನವನ್ನು ಕೊಟ್ಟರು. ಆಗ ಸರ್ವೇಶ್ವರಸ್ವಾಮಿಯೇ ದೇವರು ಎಂಬುದು ಅವನಿಗೆ ಮನದಟ್ಟಾಯಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಯೆಹೋವ ದೇವರು ಕನಿಕರಪಟ್ಟು, ಅವನ ಬಿನ್ನಹವನ್ನು ಕೇಳಿ, ಯೆರೂಸಲೇಮಿಗೆ ತನ್ನ ರಾಜ್ಯಕ್ಕೆ ಅವನನ್ನು ತಿರುಗಿ ಬರಮಾಡಿದರು. ಆಗ ಯೆಹೋವ ದೇವರೇ ದೇವರೆಂದು ಮನಸ್ಸೆಯು ತಿಳಿದುಕೊಂಡನು.