2 Chronicles 34:11 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬಡಗಿಗಳಿಗೂ ಮೇಸ್ತ್ರಿಗಳಿಗೂ ಈ ಹಣದಿಂದ ಸಂಬಳ ಕೊಟ್ಟರು; ಬೇಕಾಗಿದ್ದ ಕಲ್ಲುಗಳನ್ನೂ ಮರದ ತೊಲೆಗಳನ್ನೂ ಇತರ ವಸ್ತುಗಳನ್ನೂ ಕೊಂಡುಕೊಂಡರು. ಹಿಂದಿನ ಕಾಲದಲ್ಲಿ ಯೆಹೂದದ ಅರಸರು ಯೆಹೋವನ ದೇವಾಲಯವನ್ನು ಸರಿಪಡಿಸುವುದರ ಬಗ್ಗೆ ಹೆಚ್ಚು ಗಮನಕೊಟ್ಟಿರಲಿಲ್ಲ. ಆದ್ದರಿಂದ ಕಟ್ಟಡವು ಹಳೆಯದಾಗಿ ಬೀಳುವ ಸ್ಥಿತಿಯಲ್ಲಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕೆತ್ತಿದ ಕಲ್ಲು, ಜೋಡಿಸತಕ್ಕ ತೊಲೆ ಇವುಗಳನ್ನು ಕೊಂಡುಕೊಳ್ಳುವುದಕ್ಕಾಗಿಯೂ, ಯೆಹೂದ ರಾಜರ ಅಲಕ್ಷ್ಯದಿಂದ ಹಾಳಾಗಿದ್ದ ಕಟ್ಟಡಗಳಿಗೆ ಮಾಳಿಗೆ ಹಾಕುವುದಕ್ಕಾಗಿಯೂ, ದೇವಾಲಯವನ್ನೂ ಜೀರ್ಣೋದ್ಧಾರಮಾಡಿ ಭದ್ರಪಡಿಸುವುದಕ್ಕೆ ಬಡಗಿಗಳಿಗೂ ಶಿಲ್ಪಿಗಳಿಗೂ ಕೊಟ್ಟರು.
Kannada BSI Bible 2016
ಕೆತ್ತಿದ ಕಲ್ಲುಗಳನ್ನೂ ಜಂತೆಗಳಿಗೋಸ್ಕರ ಮರಗ ಳನ್ನೂ ಕೊಂಡುಕೊಂಡವರಾಗಿ ಯೆಹೂದದ ಅರಸು ಗಳು ಕೆಡವಿಹಾಕಿದ ಮನೆಗಳಲ್ಲಿ ನೆಲಕ್ಕೆ ಹಾಸುವದ ಕ್ಕೋಸ್ಕರ ಶಿಲ್ಪಿಯವರಿಗೂ ಕಟ್ಟುವವರಿಗೂ ಕೊಟ್ಟರು.
Kannada BSI JV (ಕನ್ನಡ ಸತ್ಯವೇದವು J.V. (BSI))
ದೇವಾಲಯದ ಕೆಲಸಮಾಡಿಸುತ್ತಿದ್ದವರು ಆ ಹಣವನ್ನು ಕೆತ್ತಿದ ಕಲ್ಲು, ಜೋಡಿಸತಕ್ಕ ತೊಲೆ ಇವುಗಳನ್ನು ಕೊಂಡುಕೊಳ್ಳುವದಕ್ಕಾಗಿಯೂ ಯೆಹೂದರಾಜರ ಅಲಕ್ಷ್ಯದಿಂದ ಹಾಳಾಗಿದ್ದ ಕಟ್ಟಡಗಳಿಗೆ ಮಾಳಿಗೆ ಹಾಕುವದಕ್ಕಾಗಿಯೂ ಅಂತು ದೇವಾಲಯವನ್ನು ಜೀರ್ಣೋದ್ಧಾರಮಾಡಿ ಭದ್ರಪಡಿಸುವದಕ್ಕೆ ಬಡಗಿಯವರಿಗೂ ಶಿಲ್ಪಿಯವರಿಗೂ ಕೊಟ್ಟರು.
Kannada Bible (KNCL) BSI 2016
ಕೆತ್ತಿದ ಕಲ್ಲು, ಜೋಡಿಸತಕ್ಕ ತೊಲೆ ಇವುಗಳನ್ನು ಕೊಂಡುಕೊಳ್ಳಲು ಹಾಗು ಜುದೇಯ ಅರಸರ ಅಲಕ್ಷ್ಯದಿಂದ ಹಾಳಾಗಿದ್ದ ಕಟ್ಟಡಗಳಿಗೆ ಮಾಳಿಗೆ ಕಟ್ಟಲು, ಅಂತು ದೇವಾಲಯವನ್ನು ದುರಸ್ತಿಮಾಡಿ ಭದ್ರಪಡಿಸಲು ಬಡಗಿಗಳಿಗೂ ಶಿಲ್ಪಿಗಳಿಗೂ ಆ ಹಣವನ್ನು ಕೊಟ್ಟರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಕೆತ್ತಿದ ಕಲ್ಲುಗಳನ್ನೂ, ತೊಲೆಗಳಿಗೋಸ್ಕರ ಮರಗಳನ್ನೂ, ಯೆಹೂದದ ಅರಸರ ಅಲಕ್ಷ್ಯದಿಂದ ಹಾಳಾಗಿದ್ದ ಕಟ್ಟಡಗಳಿಗೆ ಹಲಿಗೆಗಳನ್ನು ಕೊಂಡುಕೊಳ್ಳಲೂ, ಬಡಗಿಯರಿಗೂ, ಕಲ್ಲುಕೆಲಸದವರಿಗೂ ಆ ಹಣವನ್ನು ಕೊಟ್ಟರು.