2 Chronicles 34:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಕೆಲಸಗಾರರು ನಂಬಿಗಸ್ತಿಕೆಯಿಂದ ಕೆಲಸ ಮಾಡಿದರು. ಅವರು ಮೇಲ್ವಿಚಾರಕರು ಯಹತ್ ಮತ್ತು ಓಬದ್ಯ. ಇವರು ಲೇವಿಯರಾಗಿದ್ದರು ಮತ್ತು ಮೆರಾರೀಯ ಸಂತತಿಯವರಾಗಿದ್ದರು. ಇತರ ಮೇಲ್ವಿಚಾರಕರು ಯಾರೆಂದರೆ: ಜೆಕರ್ಯ ಮತ್ತು ಮೆಷುಲ್ಲಾಮ್. ಇವರು ಕೆಹಾತ್ಯನ ಸಂತತಿಯವರಾಗಿದ್ದರು. ವಾದ್ಯಗಳನ್ನು ಬಾರಿಸುವುದರಲ್ಲಿ ನಿಪುಣರಾದ ಲೇವಿಯರೂ ಕೆಲಸದ ಮೇಲ್ವಿಚಾರಣೆ ಮಾಡುತ್ತಿದ್ದರು. ಇತರ ಕೆಲವು ಲೇವಿಯರು, ಆ ಯೋಜನೆಯ ಅಧಿಕಾರಿಗಳಾಗಿಯೂ ಕಾರ್ಯದರ್ಶಿಗಳಾಗಿಯೂ ದ್ವಾರಪಾಲಕರಾಗಿಯೂ ನೇಮಕ ಮಾಡಲ್ಪಟ್ಟವರಾಗಿದ್ದರು. (Verses 12-13)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕೆಲಸಮಾಡುವವರು ನಂಬಿಗಸ್ತರಾಗಿದ್ದರು; ಮೆರಾರಿಯರಲ್ಲಿ ಯಹತ್, ಓಬದ್ಯ ಎಂಬ ಲೇವಿಯರೂ ಕೆಹಾತ್ಯರಲ್ಲಿ ಜೆಕರ್ಯ, ಮೆಷುಲ್ಲಾಮ್ ಎಂಬ ಲೇವಿಯರೂ ಅವರ ಮೇಲ್ವಿಚಾರಕರಾಗಿದ್ದರು.
Kannada BSI Bible 2016
ಈ ಮನುಷ್ಯರು ಕೆಲಸವನ್ನು ನಂಬಿಕೆಯಿಂದ ಮಾಡಿ ದರು. ಅವರ ವಿಚಾರಣೆಯ ಕರ್ತರು ಯಾರಂದರೆ: ಮೆರಾರಿಯ ಕುಮಾರರಲ್ಲಿ ಲೇವಿಯರಾದ ಯಹತನೂ ಒಬದ್ಯನೂ; ಕೆಹಾತ್ಯರ ಮಕ್ಕಳಲ್ಲಿ ಜೆಕರೀಯನೂ ಮೆಷುಲ್ಲಾಮನೂ; ಗೀತವಾದ್ಯಗಳಲ್ಲಿ ಬುದ್ಧಿಯುಳ್ಳವ ರಾದ ಲೇವಿಯರೆಲ್ಲರೂ ಅದನ್ನು ನಡಿಸುತ್ತಾ ಇದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕೆಲಸಮಾಡುವವರು ನಂಬಿಗಸ್ತರಾಗಿದ್ದರು; ಮೆರಾರಿಯರಲ್ಲಿ ಯಹತ್, ಓಬದ್ಯ ಎಂಬ ಲೇವಿಯರೂ ಕೆಹಾತ್ಯರಲ್ಲಿ ಜೆಕರ್ಯ, ಮೆಷುಲ್ಲಾಮ್ ಎಂಬ ಲೇವಿಯರೂ ಅವರ ಮೇಲ್ವಿಚಾರಕರಾಗಿದ್ದರು.
Kannada Bible (KNCL) BSI 2016
ಕೆಲಸಗಾರರು ನಂಬಿಗಸ್ತರಾಗಿದ್ದರು; ಮೆರಾರಿಯರಲ್ಲಿ ಯಹತ್, ಓಬದ್ಯ ಎಂಬ ಲೇವಿಯರೂ, ಕೆಹಾತ್ಯರಲ್ಲಿ ಜೆಕರ್ಯ, ಮೆಷುಲ್ಲಾಮ್ ಎಂಬ ಲೇವಿಯರೂ ಅವರ ಮೇಲ್ವಿಚಾರಕರಾಗಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈ ಮನುಷ್ಯರು ಕೆಲಸವನ್ನು ನಂಬಿಕೆಯಿಂದ ಮಾಡಿದರು. ಅವರ ವಿಚಾರಣೆಯ ಮೇಲ್ವಿಚಾರಕರು ಯಾರೆಂದರೆ ಮೆರಾರೀಯ ಪುತ್ರರಲ್ಲಿ ಲೇವಿಯರಾದ ಯಹಾತನೂ, ಓಬದ್ಯನೂ; ಕೊಹಾತ್ಯರ ಮಕ್ಕಳಲ್ಲಿ ಜೆಕರ್ಯನೂ, ಮೆಷುಲ್ಲಾಮನೂ; ಗೀತವಾದ್ಯಗಳಲ್ಲಿ ಬುದ್ಧಿಯುಳ್ಳವರಾದ ಲೇವಿಯರೆಲ್ಲರೂ ಅದನ್ನು ನಡೆಸುತ್ತಾ ಇದ್ದರು.