2 Chronicles 34:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದೇವಾಲಯದೊಳಗೆ ಶೇಖರಿಸಿಟ್ಟಿದ್ದ ಹಣವನ್ನು ಲೇವಿಯರು ತಂದುಕೊಟ್ಟರು. ಅದೇ ಸಮಯದಲ್ಲಿ ಮಹಾಯಾಜಕನಾದ ಹಿಲ್ಕೀಯನು ಮೋಶೆಯ ಧರ್ಮಶಾಸ್ತ್ರದ ಪ್ರತಿಯೊಂದನ್ನು ದೇವಾಲಯದಲ್ಲಿ ಕಂಡನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನ ಆಲಯದಲ್ಲಿ ಸಂಗ್ರಹವಾಗಿದ್ದ ಹಣವನ್ನು ಹೊರಗೆ ತೆಗೆಯುವಾಗ ಮೋಶೆಯ ಮುಖಾಂತರವಾಗಿ ಕೊಡಲ್ಪಟ್ಟ ಯೆಹೋವನ ಧರ್ಮೋಪದೇಶ ಗ್ರಂಥವು ಯಾಜಕನಾದ ಹಿಲ್ಕೀಯನಿಗೆ ಸಿಕ್ಕಿತು.
Kannada BSI Bible 2016
ಆದರೆ ಕರ್ತನ ಆಲಯಕ್ಕೆ ತಂದ ಹಣವನ್ನು ಅವರು ಹೊರಗೆ ತಕ್ಕೊಂಡು ಬರುವಾಗ ಯಾಜಕ ನಾದ ಹಿಲ್ಕೀಯನು ಮೋಶೆಯ ಕೈಯಿಂದಾದ ಕರ್ತನ ನ್ಯಾಯಪ್ರಮಾಣದ ಪುಸ್ತಕವನ್ನು ಕಂಡುಕೊಂಡನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನ ಆಲಯದಲ್ಲಿ ಸಂಗ್ರಹವಾಗಿದ್ದ ಹಣವನ್ನು ಹೊರಗೆ ತೆಗೆಯುವಾಗ ಮೋಶೆಯ ಮುಖಾಂತರವಾಗಿ ಕೊಡಲ್ಪಟ್ಟ ಯೆಹೋವನ ಧರ್ಮೋಪದೇಶದ ಗ್ರಂಥವು ಯಾಜಕನಾದ ಹಿಲ್ಕೀಯನಿಗೆ ಸಿಕ್ಕಿತು.
Kannada Bible (KNCL) BSI 2016
ಸರ್ವೇಶ್ವರನ ಆಲಯದಲ್ಲಿ ಸಂಗ್ರಹವಾಗಿದ್ದ ಹಣವನ್ನು ಹೊರಗೆ ತೆಗೆಯುವಾಗ ಮೋಶೆಯ ಮುಖಾಂತರ ಕೊಡಲಾಗಿದ್ದ ಸರ್ವೇಶ್ವರನ ಧರ್ಮೋಪದೇಶದ ಗ್ರಂಥವು ಯಾಜಕ ಹಿಲ್ಕೀಯನಿಗೆ ಸಿಕ್ಕಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರ ಆಲಯಕ್ಕೆ ತಂದ ಹಣವನ್ನು ಅವರು ಹೊರಗೆ ತೆಗೆದುಕೊಂಡು ಬರುವಾಗ, ಯಾಜಕನಾದ ಹಿಲ್ಕೀಯನು ಮೋಶೆಯ ಕೈಯಿಂದಾದ ಯೆಹೋವ ದೇವರ ನಿಯಮದ ಗ್ರಂಥವನ್ನು ಕಂಡುಕೊಂಡನು.