2 Chronicles 34:17 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದೇವಾಲಯದೊಳಗಿದ್ದ ಹಣವನ್ನು ಅವರು ತೆಗೆದು ಅದನ್ನು ಕೆಲಸಗಾರರಿಗೂ ಮೇಲ್ವಿಚಾರಕರಿಗೂ ಕೊಡುತ್ತಿದ್ದಾರೆ. ಯಾಜಕನಾದ ಹಿಲ್ಕೀಯನು ಈ ಪುಸ್ತಕವನ್ನು ನನಗೆ ಕೊಟ್ಟನು”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನ ದೇವಾಲಯದಲ್ಲಿ ಸಂಗ್ರಹವಾದ ಹಣವನ್ನು ತೆಗೆದು ಕೆಲಸ ಮಾಡಿಸುವವರಿಗೂ, ಮಾಡುವವರಿಗೂ ಒಪ್ಪಿಸಿದರು” ಎಂದು ತಿಳಿಸಿದನು.
Kannada BSI Bible 2016
ಇದಲ್ಲದೆ ಅವರು ಕರ್ತನ ಆಲಯದಲ್ಲಿ ಸಿಕ್ಕಿದ ಹಣವನ್ನು ಸುರಿದು ವಿಚಾರಕರ ಕೈಯಲ್ಲಿಯೂ ಕೆಲಸದವರ ಕೈಯ ಲ್ಲಿಯೂ ಒಪ್ಪಿಸಿದ್ದಾರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ದೇವಾಲಯದಲ್ಲಿ ಸಂಗ್ರಹವಾದ ಹಣವನ್ನು ತೆಗೆದು ಕೆಲಸಮಾಡಿಸುವವರಿಗೂ ಮಾಡುವವರಿಗೂ ಒಪ್ಪಿಸಿದರು ಎಂದು ತಿಳಿಸಿದನು.
Kannada Bible (KNCL) BSI 2016
ದೇವಾಲಯದಲ್ಲಿ ಸಂಗ್ರಹವಾದ ಹಣವನ್ನು ತೆಗೆದು ಮೇಸ್ತ್ರಿಗಳಿಗೂ ಕೆಲಸಮಾಡುವವರಿಗೂ ಒಪ್ಪಿಸಿದ್ದಾರೆ,” ಎಂದು ತಿಳಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಅವರು ಯೆಹೋವ ದೇವರ ಆಲಯದಲ್ಲಿ ದೊರಕಿದ ಹಣವನ್ನು ತೆಗೆದು ಮೇಲ್ವಿಚಾರಕರ ಕೈಯಲ್ಲಿ ಮತ್ತು ಕೆಲಸದವರ ಕೈಯಲ್ಲಿ ಒಪ್ಪಿಸಿದ್ದಾರೆ.