2 Chronicles 34:22 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಹಿಲ್ಕೀಯನೂ ಅರಸನ ಸೇವಕರೂ ಪ್ರವಾದಿನಿಯಾಗಿದ್ದ ಹುಲ್ದಳ ಬಳಿಗೆ ಹೋದರು. ಆಕೆ ತೊಕ್ಹತನ ಮಗನಾದ ಶಲ್ಲೂಮನ ಹೆಂಡತಿಯಾಗಿದ್ದಳು. ತೊಕ್ಹತನು ಹಸ್ರನ ಮಗ. ಇವನು ಅರಸನ ಬಟ್ಟೆಬರೆಗಳ ಮುಖ್ಯಸ್ತನಾಗಿದ್ದನು. ಹುಲ್ದಳು ಜೆರುಸಲೇಮಿನ ಹೊಸ ಬಡಾವಣೆಯಲ್ಲಿ ವಾಸ ಮಾಡುತ್ತಿದ್ದಳು. ಅರಸನು ಹೇಳಿದ್ದನ್ನೆಲ್ಲಾ ಸೇವಕರು ಆಕೆಗೆ ತಿಳಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಹಿಲ್ಕೀಯನೂ ಅರಸನ ಜನರೂ ಹುಲ್ದ ಎಂಬ ಪ್ರವಾದಿನಿಯ ಬಳಿಗೆ ಹೋಗಿ, ಆಕೆಯ ಹತ್ತಿರ ವಿಚಾರಿಸಿದರು. ಹಸ್ರನ ಮೊಮ್ಮಗನೂ ತೊಕ್ಹತನ ಮಗನೂ ರಾಜವಸ್ತ್ರಾಗಾರದ ಅಧಿಪತಿಯೂ ಆಗಿದ್ದ ಶಲ್ಲೂಮನು ಆಕೆಯ ಗಂಡನು. ಆಕೆಯು ಯೆರೂಸಲೇಮಿನ ಎರಡನೆಯ ಕೇರಿಯಲ್ಲಿ ವಾಸವಾಗಿದ್ದಳು.
Kannada BSI Bible 2016
ಆಗ ಹಿಲ್ಕೀ ಯನೂ ಅರಸನಿಂದ ನೇಮಿಸಲ್ಪಟ್ಟವರೂ ಹಸ್ರನ ಮಗನೂ ತೊಕ್ಹತನ ಮಗನೂ ವಸ್ತ್ರಗಳ ಕಾವಲುಗಾ ರನೂ ಆದ ಶಲ್ಲೂಮನ ಹೆಂಡತಿಯಾಗಿರುವ ಪ್ರವಾದಿ ನಿಯಾದ ಹುಲ್ದಳ ಬಳಿಗೆ ಹೋಗಿ ಅವಳ ಸಂಗಡ ಅದನ್ನು ಕುರಿತು ಮಾತನಾಡಿದರು. (ಅವಳು ಯೆರೂ ಸಲೇಮಿನೊಳಗೆ ಮಹಾವಿದ್ಯಾಲಯದಲ್ಲಿ ವಾಸವಾಗಿ ದ್ದಳು.)
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಹಿಲ್ಕೀಯನೂ ಅರಸನ ಜನರೂ ಹುಲ್ದ ಎಂಬ ಪ್ರವಾದಿನಿಯ ಬಳಿಗೆ ಹೋಗಿ ಅಪ್ಪಣೆಯಾದಂತೆ ಆಕೆಯ ಹತ್ತಿರ ವಿಚಾರಿಸಿದರು. ಹಸ್ರನ ಮೊಮ್ಮಗನೂ ತೊಕ್ಹತನ ಮಗನೂ ರಾಜವಸ್ತ್ರಾಗಾರದ ಅಧಿಪತಿಯೂ ಆಗಿದ್ದ ಶಲ್ಲೂಮನು ಆಕೆಯ ಗಂಡನು. ಆಕೆಯು ಯೆರೂಸಲೇವಿುನ ಎರಡನೆಯ ಕೇರಿಯಲ್ಲಿ ವಾಸವಾಗಿದ್ದಳು.
Kannada Bible (KNCL) BSI 2016
ಆಗ ಹಿಲ್ಕೀಯನೂ ಅರಸನ ಜನರೂ ಹುಲ್ದ ಎಂಬ ಪ್ರವಾದಿನಿಯ ಬಳಿಗೆ ಹೋಗಿ, ಅಪ್ಪಣೆಯಾದಂತೆ ಆಕೆಯ ಬಳಿ ವಿಚಾರಿಸಿದರು. ಹಸ್ತನ ಮೊಮ್ಮಗನೂ ತೊಕ್ಹತನ ಮಗನೂ ರಾಜವಸ್ತ್ರಾಗಾರದ ಅಧಿಪತಿಯೂ ಆಗಿದ್ದ ಶಲ್ಲೂಮನು ಆಕೆಯ ಗಂಡ. ಆಕೆ ಜೆರುಸಲೇಮಿನ ಎರಡನೆಯ ಕೇರಿಯಲ್ಲಿ ವಾಸವಾಗಿದ್ದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಹಿಲ್ಕೀಯನೂ ಅರಸನ ಜನರೂ ಹಸ್ರನ ಮಗನೂ ತೊಕ್ಹತನ ಮಗನೂ ಪ್ರವಾದಿನಿ ಹುಲ್ದಳ ಬಳಿಗೆ ಹೋಗಿ ವಿಚಾರಿಸಿದರು. ಆಕೆಯು ರಾಜವಸ್ತ್ರಗಳ ಮೇಲ್ವಿಚಾರಕನೂ ಆದ ಶಲ್ಲೂಮನ ಹೆಂಡತಿ, ಅವಳು ಯೆರೂಸಲೇಮಿನೊಳಗೆ ಹೊಸದಾದ ನಿರ್ಮಿತ ಭಾಗದಲ್ಲಿ ವಾಸವಾಗಿದ್ದಳು.