2 Chronicles 34:3 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ತನ್ನ ಪಿತೃವಾದ ದಾವೀದನು ಅನುಸರಿಸಿದ್ದ ದೇವರನ್ನು ಅನುಸರಿಸಿದನು. ಆಗ ಅವನು ಇನ್ನೂ ಎಳೆಯ ಪ್ರಾಯದವನಾಗಿದ್ದನು. ಅವನು ಪಟ್ಟಕ್ಕೆ ಬಂದ ಹನ್ನೆರಡನೆಯ ವರ್ಷದಲ್ಲಿ, ಜೆರುಸಲೇಮಿನಲ್ಲಿ ಮತ್ತು ಯೆಹೂದದಲ್ಲಿದ್ದ ಎತ್ತರವಾದ ಸ್ಥಳಗಳನ್ನೂ ಅಶೇರಸ್ತಂಭಗಳನ್ನೂ ಎರಕದ ಮತ್ತು ಕೆತ್ತನೆಯ ವಿಗ್ರಹಗಳನ್ನೂ ನಾಶಮಾಡಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ತನ್ನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ಇನ್ನೂ ಯೌವನಸ್ಥನಾಗಿರುವಾಗಲೇ ತನ್ನ ಪೂರ್ವಿಕನಾದ ದಾವೀದನ ದೇವರನ್ನು ಹುಡುಕುವವನಾದನು. ಹನ್ನೆರಡನೆಯ ವರ್ಷ ಯೆಹೂದದಲ್ಲಿಯೂ ಯೆರೂಸಲೇಮಿನಲ್ಲಿ ಇದ್ದ ಪೂಜಾಸ್ಥಳಗಳನ್ನೂ, ಅಶೇರ ಸ್ತಂಭಗಳನ್ನೂ, ಕೆತ್ತಿದ ಮತ್ತು ಎರಕದ ವಿಗ್ರಹಗಳನ್ನೂ ತೆಗೆದುಹಾಕಿ ದೇಶವನ್ನು ಶುದ್ಧಿಗೊಳಿಸಿದನು.
Kannada BSI Bible 2016
ಅವನು ಇನ್ನೂ ಹುಡುಗನಾಗಿರುವಾಗ ತನ್ನ ಆಳ್ವಿಕೆಯ ಎಂಟನೇ ವರುಷದಲ್ಲಿ ತನ್ನ ಪಿತೃವಾದ ದಾವೀದನ ದೇವರನ್ನು ಹುಡುಕಲು ಆರಂಭಿಸಿದನು. ಅವನ ಆಳ್ವಿಕೆಯ ಹನ್ನೆರಡನೇ ವರುಷದಲ್ಲಿ ಉನ್ನತ ಸ್ಥಳಗಳನ್ನೂ ತೋಪುಗಳನ್ನೂ ಕೆತ್ತಿದ ವಿಗ್ರಹಗಳನ್ನೂ ಎರಕಹೊಯಿದ ವಿಗ್ರಹಗಳನ್ನೂ ತೆಗೆದುಹಾಕಿ ಯೆಹೂದ ಯೆರೂಸಲೇಮನ್ನು ಶುಚಿಮಾಡಲು ಆರಂಭಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ತನ್ನ ಆಳಿಕೆಯ ಎಂಟನೆಯ ವರುಷದಲ್ಲಿ ಇನ್ನೂ ಯೌವನಸ್ಥನಾಗಿರುವಾಗಲೇ ತನ್ನ ಪೂರ್ವಿಕನಾದ ದಾವೀದನ ದೇವರನ್ನು ಹುಡುಕುವವನಾದನು. ಹನ್ನೆರಡನೆಯ ವರುಷ ಯೆಹೂದದಲ್ಲಿಯೂ ಯೆರೂಸಲೇವಿುನಲ್ಲಿಯೂ ಇದ್ದ ಪೂಜಾಸ್ಥಳಗಳನ್ನೂ ಅಶೇರ ಸ್ತಂಭಗಳನ್ನೂ ಕೆತ್ತಿದ ಮತ್ತು ಎರಕದ ವಿಗ್ರಹಗಳನ್ನೂ ತೆಗೆದುಹಾಕಿ ದೇಶವನ್ನು ಶುದ್ಧಪಡಿಸಿದನು.
Kannada Bible (KNCL) BSI 2016
ಯೋಷೀಯನು ತನ್ನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ, ಇನ್ನೂ ಯೌವನಸ್ಥನಾಗಿರುವಾಗಲೇ, ತನ್ನ ಪೂರ್ವಜನಾದ ದಾವೀದನ ದೇವರನ್ನು ಅವಲಂಬಿಸುವವನಾದನು; ಹನ್ನೆರಡನೆಯ ವರ್ಷ ಜುದೇಯದಲ್ಲೂ, ಜೆರುಸಲೇಮಿನಲ್ಲೂ ಇದ್ದ ಪೂಜಾಸ್ಥಳಗಳನ್ನು, ಆಶೇರಸ್ತಂಭಗಳನ್ನು ಹಾಗು ಕೆತ್ತಿದ ಮತ್ತು ಎರಕದ ವಿಗ್ರಹಗಳನ್ನು ತೆಗೆದುಹಾಕಿ ನಾಡನ್ನು ಶುದ್ಧಪಡಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ಇನ್ನೂ ಬಾಲಕನಾಗಿರುವಾಗ, ತನ್ನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ತನ್ನ ಪೂರ್ವಜನಾದ ದಾವೀದನ ದೇವರನ್ನು ಹುಡುಕಲು ಆರಂಭಿಸಿದನು. ಅವನ ಆಳ್ವಿಕೆಯ ಹನ್ನೆರಡನೆಯ ವರ್ಷದಲ್ಲಿ ಉನ್ನತ ಪೂಜಾಸ್ಥಳಗಳನ್ನೂ, ಅಶೇರ ಸ್ತಂಭಗಳನ್ನೂ, ಕೆತ್ತಿದ ವಿಗ್ರಹಗಳನ್ನೂ ತೆಗೆದುಹಾಕಿ, ಯೆಹೂದ ಮತ್ತು ಯೆರೂಸಲೇಮನ್ನು ಶುಚಿಮಾಡಲು ಆರಂಭಿಸಿದನು.