2 Chronicles 35:25 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆರೆಮೀಯನು ಅವನ ಬಗ್ಗೆ ಶೋಕಗೀತೆಗಳನ್ನು ರಚಿಸಿ ಹಾಡಿದನು. ಆ ಗೀತೆಗಳನ್ನು ಗಂಡಸರು ಹೆಂಗಸರು ಈಗಲೂ ಹಾಡುತ್ತಾರೆ. ಯೋಷೀಯನ ಕುರಿತು ದುಃಖದ ಹಾಡನ್ನು ಹಾಡುವದು ಅವರಿಗೆ ರೂಢಿಯಾಗಿದೆ. ಆ ಗೀತೆಗಳನ್ನು ಮರಣದ ಹಾಡಿನ ಪುಸ್ತಕದಲ್ಲಿ ಬರೆಯಲಾಗಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆರೆಮೀಯನು ಯೋಷೀಯನನ್ನು ಕುರಿತು ಶೋಕಗೀತವನ್ನು ರಚಿಸಿದನು. ಎಲ್ಲಾ ಗಾಯಕರೂ ಗಾಯಕಿಯರೂ ಅವನನ್ನು ಇಂದಿನ ವರೆಗೆ ತಮ್ಮ ಶೋಕಗೀತಗಳಲ್ಲಿ ವರ್ಣಿಸುತ್ತಿರುತ್ತಾರೆ. ಆ ಗೀತೆಗಳನ್ನು ಹಾಡುವುದು ಇಸ್ರಾಯೇಲರಲ್ಲಿ ಒಂದು ಪದ್ಧತಿಯಾಗಿದೆ. ಅವು ಶೋಕಗೀತಗ್ರಂಥದಲ್ಲಿ ಬರೆದಿರುತ್ತವೆ.
Kannada BSI Bible 2016
ಇದಲ್ಲದೆ ಯೆರೆವಿಾಯನು ಯೋಷೀಯನಿಗೋಸ್ಕರ ಗೋಳಾಡಿದನು. ಹಾಡುಗಾರರೂ ಹಾಡುಗಾರ್ತಿ ಯರೂ ಯೋಷೀಯನಿಗೋಸ್ಕರ ಇದುವರೆಗೂ ತಮ್ಮ ಗೋಳಾಟಗಳಲ್ಲಿ ಹೇಳುತ್ತಾರೆ. ಇದು ಇಸ್ರಾಯೇಲಿ ನಲ್ಲಿ ನೇಮಕವಾಯಿತು. ಇಗೋ, ಅವು ಪ್ರಲಾಪ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆರೆಮೀಯನು ಯೋಷೀಯನನ್ನು ಕುರಿತು ಶೋಕಗೀತವನ್ನು ರಚಿಸಿದನು. ಎಲ್ಲಾ ಗಾಯಕರೂ ಗಾಯಕಿಯರೂ ಅವನನ್ನು ಇಂದಿನವರೆಗೆ ತಮ್ಮ ಶೋಕಗೀತಗಳಲ್ಲಿ ವರ್ಣಿಸುತ್ತಿರುತ್ತಾರೆ. ಆ ಗೀತಗಳನ್ನು ಹಾಡುವದು ಇಸ್ರಾಯೇಲ್ಯರಲ್ಲಿ ಒಂದು ಪದ್ಧತಿಯಾಯಿತು.
Kannada Bible (KNCL) BSI 2016
ಯೆರೆಮೀಯನು ಯೋಷೀಯನನ್ನು ಕುರಿತು ಶೋಕಗೀತೆಯನ್ನು ರಚಿಸಿದನು. ಎಲ್ಲ ಗಾಯಕರೂ ಗಾಯಕಿಯರೂ ಅವನನ್ನು ಇಂದಿನವರೆಗು ತಮ್ಮ ಶೋಕಗೀತೆಗಳಲ್ಲಿ ವರ್ಣಿಸುತ್ತಿರುತ್ತಾರೆ. ಆ ಗೀತೆಗಳನ್ನು ಹಾಡುವುದು ಇಸ್ರಯೇಲರಲ್ಲಿ ಒಂದು ಪದ್ಧತಿಯಾಗಿದೆ. ಅವು ಶೋಕಗೀತೆ ಗ್ರಂಥದಲ್ಲಿ ಲಿಖಿತವಾಗಿವೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆರೆಮೀಯನು ಯೋಷೀಯನಿಗೋಸ್ಕರ ದುಃಖ ಗೀತವನ್ನು ಬರೆದನು. ಹಾಡುಗಾರರೂ, ಹಾಡುಗಾರ್ತಿಯರೂ ಯೋಷೀಯನನ್ನು ಇದುವರೆಗೂ ತಮ್ಮ ಗೋಳಾಟ ಪದ್ಯಗಳಲ್ಲಿ ಸ್ಮರಿಸಿಕೊಳ್ಳುತ್ತಾರೆ. ಇದು ಇಸ್ರಾಯೇಲಿನಲ್ಲಿ ಸಂಪ್ರದಾಯವಾಯಿತು ಮತ್ತು ಈ ಗೀತೆಗಳು ಪ್ರಲಾಪಗಳಲ್ಲಿ ಬರೆದಿರುತ್ತವೆ.