2 Chronicles 35:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಪವಿತ್ರಸ್ಥಳದಲ್ಲಿ ಲೇವಿಯರೊಂದಿಗೆ ನಿಲ್ಲಿರಿ ಮತ್ತು ಬೇರೆ ಕುಲಗಳ ಜನರಿಗೂ ಸಹಾಯ ಮಾಡುವುದಕ್ಕಾಗಿ ಹೀಗೆ ಮಾಡಿರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿಮ್ಮ ಸಹೋದರರಾದ ಇಸ್ರಾಯೇಲರ ಒಂದೊಂದು ಗೋತ್ರಶಾಖೆಗಳಿಗಾಗಿ ನಿಮ್ಮಲ್ಲಿ ಒಂದೊಂದು ಗುಂಪಿನವರು ಪವಿತ್ರಸ್ಥಾನದಲ್ಲಿ ನಿಂತು ಪಸ್ಕದ ಕುರಿಯನ್ನು ವಧಿಸಲಿ
Kannada BSI Bible 2016
ಜನರಾದ ನಿಮ್ಮ ಸಹೋದರರ ಪಿತೃಗಳ ಕುಟುಂಬ ಗಳ ವಿಭಾಗದ ಪ್ರಕಾರವಾಗಿ ಪರಿಶುದ್ಧ ಸ್ಥಾನದಲ್ಲಿ ನಿಲ್ಲಿರಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿಮ್ಮ ಸಹೋದರರಾದ ಇಸ್ರಾಯೇಲ್ಯರ ಒಂದೊಂದು ಗೋತ್ರಶಾಖೆಗೋಸ್ಕರ ನಿಮ್ಮಲ್ಲಿ ಒಂದೊಂದು ಗುಂಪಿನವರು ಪವಿತ್ರಸ್ಥಾನದಲ್ಲಿ ನಿಂತು ಪಸ್ಕದ ಕುರಿಯನ್ನು ವಧಿಸಲಿ.
Kannada Bible (KNCL) BSI 2016
ನಿಮ್ಮ ಸಹೋದರರಾದ ಇಸ್ರಯೇಲರ ಒಂದೊಂದು ಗೋತ್ರ ಶಾಖೆಯ ಪರವಾಗಿ, ನಿಮ್ಮಲ್ಲಿ ಒಂದೊಂದು ಗುಂಪಿನವರು ಪವಿತ್ರಸ್ಥಾನದಲ್ಲಿ ನಿಂತು ಪಾಸ್ಕದ ಕುರಿಮರಿಯನ್ನು ವಧಿಸಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಇದರ ಹೊರತಾಗಿ, ಪವಿತ್ರ ಸ್ಥಳಗಳು ಸಾಮಾನ್ಯ ಜನರ ಭಾಗಗಳಿಗೆ ಅನುಗುಣವಾಗಿ ನಿಲ್ಲಬೇಕು, ಲೇವಿಯರು ಕೂಡ ಕುಲಗಳ ಭಾಗಗಳಿಗೆ ಅನುಗುಣವಾಗಿ ನಿಲ್ಲಬೇಕು.