2 Chronicles 35:7 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇಸ್ರೇಲರಿಗೆ ಅರಸನಾದ ಯೋಷೀಯನು ಪಸ್ಕಹಬ್ಬದ ಯಜ್ಞಗಳಿಗಾಗಿ ಮೂವತ್ತು ಸಾವಿರ ಕುರಿಮರಿಗಳನ್ನು ಕೊಟ್ಟನು. ಇದರ ಮೇಲೆ ಮೂರು ಸಾವಿರ ಪಶುಗಳನ್ನು ಅವನು ಜನರಿಗೆ ಕೊಟ್ಟನು. ಈ ಪ್ರಾಣಿಗಳೆಲ್ಲಾ ಅರಸನಾದ ಯೋಷೀಯನದೇ ಆಗಿದ್ದವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೋಷೀಯನು ಹಬ್ಬಕ್ಕೆ ಬಂದ ಜನರಿಗೆ ಪಸ್ಕಯಜ್ಞಕ್ಕಾಗಿ ರಾಜಕೀಯ ಸೊತ್ತಿನಿಂದ ಮೂವತ್ತು ಸಾವಿರ ಆಡುಮರಿಗಳನ್ನೂ, ಕುರಿಮರಿಗಳನ್ನೂ, ಮೂರು ಸಾವಿರ ಹೋರಿಗಳನ್ನೂ ದಾನಮಾಡಿದನು.
Kannada BSI Bible 2016
ಆಗ ಯೋಷೀಯನು ಸಿದ್ಧವಾಗಿದ್ದ ಸಮಸ್ತ ಜನ ರಿಗೆ ಪಸ್ಕದ ಬಲಿಗೋಸ್ಕರ ಮಂದೆಯಿಂದ ಮೂವತ್ತು ಸಾವಿರ ಕುರಿಮರಿಗಳನ್ನೂ ಮೇಕೆಯ ಮರಿಗಳನ್ನೂ ಕೊಟ್ಟನು. ಇದಲ್ಲದೆ ಮೂರು ಸಾವಿರ ಎತ್ತುಗಳನ್ನು ಕೊಟ್ಟನು; ಇವೆಲ್ಲಾ ಅರಸನ ಸೊತ್ತಿನಿಂದಲೇ
Kannada BSI JV (ಕನ್ನಡ ಸತ್ಯವೇದವು J.V. (BSI))
ಯೋಷೀಯನು ಹಬ್ಬಕ್ಕೆ ಬಂದ ಜನರಿಗೆ ಪಸ್ಕ ಯಜ್ಞಕ್ಕಾಗಿ ರಾಜಕೀಯ ಸೊತ್ತಿನಿಂದ ಮೂವತ್ತು ಸಾವಿರ ಆಡುಮರಿಗಳನ್ನೂ ಕುರಿಮರಿಗಳನ್ನೂ ಮೂರು ಸಾವಿರ ಹೋರಿಗಳನ್ನೂ ದಾನಮಾಡಿದನು.
Kannada Bible (KNCL) BSI 2016
ಯೋಷೀಯನು, ಹಬ್ಬಕ್ಕೆ ಬಂದ ಜನರಿಗೆ ಪಾಸ್ಕ ಬಲಿಗಾಗಿ ಆಸ್ಥಾನದ ಸೊತ್ತಿನಿಂದ ಮೂವತ್ತು ಸಾವಿರ ಆಡುಮರಿಗಳನ್ನೂ ಕುರಿಮರಿಗಳನ್ನೂ ಮೂರು ಸಾವಿರ ಹೋರಿಗಳನ್ನೂ ದಾನಮಾಡಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಯೋಷೀಯನು ಸಿದ್ಧವಾಗಿದ್ದ ಸಮಸ್ತ ಸಾಮಾನ್ಯ ಜನರಿಗೆ ಪಸ್ಕದ ಆಡುಮರಿಗೋಸ್ಕರ ಮಂದೆಯಿಂದ ಮೂವತ್ತು ಸಾವಿರ ಕುರಿಮರಿಗಳನ್ನೂ, ಮೇಕೆಯ ಮರಿಗಳನ್ನೂ ಕೊಟ್ಟನು. ಇದಲ್ಲದೆ ಮೂರು ಸಾವಿರ ಎತ್ತುಗಳನ್ನೂ ಕೊಟ್ಟನು. ಇವೆಲ್ಲಾ ಅರಸನ ಸ್ವಂತ ಸೊತ್ತಿನಿಂದಲೇ ಕೊಟ್ಟನು.