2 Chronicles 4:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಹಂಡೆ, ಸಲಿಕೆ, ಮುಳ್ಳು ಇವುಗಳನ್ನೆಲ್ಲಾ ದೇವಾಲಯಕ್ಕಾಗಿ ಸೊಲೊಮೋನನು ಹೇಳಿದಂತೆಯೇ ಮಾಡಿದನು. ಇವೆಲ್ಲವನ್ನು ಹೊಳೆಯುವ ತಾಮ್ರದಿಂದ ಮಾಡಿ ಮುಗಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹಂಡೆ, ಸಲಿಕೆ, ಮುಳ್ಳುಸೌಟುಗಳು ಹೀಗೆ ಹೂರಾಮಾಬೀವನು ಅರಸನಾದ ಸೊಲೊಮೋನನ ಅಪ್ಪಣೆಯ ಮೇರೆಗೆ ಯೆಹೋವನ ಆಲಯಕ್ಕಾಗಿ ಅದರ ಎಲ್ಲಾ ಸಾಮಾನುಗಳನ್ನು ಒಪ್ಪ ಹಾಕಿದ ತಾಮ್ರದಿಂದ ಮಾಡಿ ಮುಗಿಸಿದನು.
Kannada BSI Bible 2016
ಅವುಗಳ ಎಲ್ಲಾ ಸಾಮಾನುಗಳನ್ನೂ ಅರಸನಾದ ಸೊಲೊಮೋನನಿಗೆ ಅವನ ತಂದೆಯಾದ ಹೂರಾಮನು ಹೊಳೆಯುವ ತಾಮ್ರದಿಂದ ಕರ್ತನ ಆಲಯಕ್ಕೋಸ್ಕರ ಮಾಡಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೂರಾಮಾಬೀವನು ಅರಸನಾದ ಸೊಲೊಮೋನನ ಅಪ್ಪಣೆಯ ಮೇರೆಗೆ ಯೆಹೋವನ ಆಲಯಕ್ಕೋಸ್ಕರ ಅದರ ಎಲ್ಲಾ ಸಾಮಾನುಗಳನ್ನು ಒಪ್ಪಹಾಕಿದ ತಾಮ್ರದಿಂದ ಮಾಡಿ ತೀರಿಸಿದನು.
Kannada Bible (KNCL) BSI 2016
ಹಂಡೆ, ಸಲಿಕೆ ಹಾಗೂ ಮುಳ್ಳು, ಹೀಗೆ ಹೂರಾಮಾಬೀಮನು ಅರಸ ಸೊಲೊಮೋನನ ಅಪ್ಪಣೆಯ ಮೇರೆಗೆ ಸರ್ವೇಶ್ವರನ ಆಲಯಕ್ಕಾಗಿ ಅದರ ಎಲ್ಲಾ ಸಾಮಾನುಗಳನ್ನು ಒಪ್ಪಹಾಕಿದ ಕಂಚಿನಿಂದ ಮಾಡಿ ಮುಗಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪಾತ್ರೆಗಳು, ಸಲಿಕೆಗಳು, ಮುಳ್ಳುಗಳು. ಅವುಗಳ ಎಲ್ಲಾ ವಸ್ತುಗಳನ್ನೂ ಅರಸನಾದ ಸೊಲೊಮೋನನಿಗೆ ಅವನ ತಂದೆಯು ಹೇಳಿದಂತೆ ಹೂರಾಮ ಅಬೀ ಹೊಳೆಯುವ ಕಂಚಿನಿಂದ ಯೆಹೋವ ದೇವರ ಆಲಯಕ್ಕೋಸ್ಕರ ಮಾಡಿದನು.