2 Chronicles 4:17 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ರಾಜನಾದ ಸೊಲೊಮೋನನು ಈ ಉಪಕರಣಗಳನ್ನೆಲ್ಲಾ ಮೊದಲು ಜೋರ್ಡನ್ ತಗ್ಗಿನ ಸುಕ್ಕೋತ್ ಮತ್ತು ಚೆರೇದ ಸ್ಥಳಗಳಲ್ಲಿ ದೊರಕುವ ಆವೆಮಣ್ಣಿನಿಂದ ಆಕಾರಗಳನ್ನು ಸಿದ್ಧಪಡಿಸಿ ಅದಕ್ಕೆ ಎರಕಹೊಯಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅರಸನು ಯೊರ್ದನ್ ತಗ್ಗಿನಲ್ಲಿ ಸುಕ್ಕೋತಿಗೂ ಚೆರೇದಕ್ಕೂ ಮಧ್ಯದಲ್ಲಿರುವ ಕುಲುಮೆಯ ಜೇಡಿಮಣ್ಣಿನ ಸ್ಥಳದಲ್ಲಿ ಎರಕ ಹೊಯ್ಯಿಸಿದನು.
Kannada BSI Bible 2016
ಯೊರ್ದನಿನ ತಗ್ಗಿ ನಲ್ಲಿ ಸುಕ್ಕೋತಿಗೂ ಚೆರೇದಕ್ಕೂ ನಡುವೆ ಇರುವ ಜೇಡಿಮಣ್ಣಿನ ಸ್ಥಳದಲ್ಲಿ ಅರಸನು ಅವುಗಳನ್ನು ಎರಕ ಹೊಯಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅರಸನು ಯೊರ್ದನ್ ತಗ್ಗಿನಲ್ಲಿ ಸುಕ್ಕೋತಿಗೂ ಚೆರೇದಕ್ಕೂ ಮಧ್ಯದಲ್ಲಿರುವ ಮಣ್ಣುನೆಲದಲ್ಲಿ ಎರಕ ಹೊಯ್ಸಿದನು.
Kannada Bible (KNCL) BSI 2016
ಅರಸನು ಜೋರ್ಡನ್ ತಗ್ಗಿನಲ್ಲಿ ಸುಕ್ಕೋತಿಗೂ ಚೆರೇದಕ್ಕೂ ಮಧ್ಯದಲ್ಲಿರುವ ಕುಲುಮೆಯಲ್ಲಿ ಎರಕ ಹೊಯ್ಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೊರ್ದನಿಗೆ ಸೇರಿದ ಬಯಲಾದ ಸುಕ್ಕೋತಿಗೂ ಚರೇದನಿಗೂ ನಡುವೆ ಇರುವ ಜೇಡಿಮಣ್ಣಿನ ಅಚ್ಚುಗಳಲ್ಲಿ ಅರಸನು ಅವುಗಳನ್ನು ಎರಕ ಹೊಯ್ಯಿಸಿದನು.