2 Chronicles 4:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆ ನೀರಿನ ಪಾತ್ರೆಯನ್ನು ಎರಕ ಹೊಯ್ಯುವಾಗ ಅದರ ಬಾಯಿಯ ಅಂಚಿನ ಕೆಳಗೆ ಸುತ್ತಲೂ ಹೋರಿಯ ಚಿತ್ರವನ್ನು ಎರಡು ಸಾಲಾಗಿ ಹತ್ತು ಮೊಳ ಎರಕ ಹೊಯ್ಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದರ ಕೆಳಭಾಗದಲ್ಲಿ ಅದರ ಸುತ್ತಲೂ ಎತ್ತುಗಳ ರೂಪಗಳಿದ್ದವು. ಅವು ಒಂದೊಂದು ಮೊಳಕ್ಕೆ ಹತ್ತರಂತೆ ಆ ಕೊಳದ ಪಾತ್ರೆಯ ಸುತ್ತಲೂ ಇದ್ದವು. ಇದು ಎರಕ ಹೊಯ್ಯಲ್ಪಡುವಾಗ ಎತ್ತುಗಳ ರೂಪ ಎರಡು ಸಾಲಾಗಿ ಎರಕ ಹೊಯ್ಯಲ್ಪಟ್ಟಿದ್ದವು.
Kannada BSI Bible 2016
ಅದರ ಕೆಳಭಾಗದಲ್ಲಿ ಸುತ್ತಲೂ ಎತ್ತುಗಳ ರೂಪಗಳಿದ್ದವು; ಅವು ಒಂದೊಂದು ಮೊಳಕ್ಕೆ ಹತ್ತಾಗಿ ಆ ಸಮುದ್ರದ ಸುತ್ತಲೂ ಇದ್ದವು. ಇದು ಎರಕ ಹೊಯ್ಯಲ್ಪಡುವಾಗ ಎತ್ತುಗಳ ರೂಪ ಎರಡು ಸಾಲಾಗಿ ಎರಕ ಹೊಯ್ಯ ಲ್ಪಟ್ಟಿದ್ದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದನ್ನು ಎರಕಹೊಯ್ಯುವಾಗ ಅದರ [ಅಂಚಿನ] ಕೆಳಗೆ ಸುತ್ತಲೂ ಮೊಳಕ್ಕೆ ಹತ್ತರಂತೆ ಹೋರಿಗಳ ಚಿತ್ರಗಳನ್ನು ಎರಡು ಸಾಲಾಗಿ ಎರಕ ಹೊಯ್ಸಿದನು.
Kannada Bible (KNCL) BSI 2016
ಅದನ್ನು ಎರಕಹೊಯ್ಯುವಾಗ ಅದರ (ಅಂಚಿನ) ಕೆಳಗೆ ಸುತ್ತಲೂ ಮೊಳಕ್ಕೆ ಹತ್ತರಂತೆ ಹೋರಿಗಳ ಚಿತ್ರಗಳನ್ನು ಎರಡು ಸಾಲಾಗಿ ಎರಕ ಹೊಯ್ಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದರ ಅಂಚಿನ ಕೆಳಭಾಗದಲ್ಲಿ ಅದರ ಸುತ್ತಲೂ ಎತ್ತುಗಳ ರೂಪಗಳಿದ್ದವು; ಅವು ಒಂದೊಂದು ಮೀಟರಿಗೆ ಹತ್ತರಂತೆ, ಆ ಕೊಳದ ಪಾತ್ರೆಯ ಸುತ್ತಲೂ ಇದ್ದವು; ಇದು ಎರಕ ಹೊಯ್ಯುವಾಗ, ಎತ್ತುಗಳ ರೂಪಗಳು ಎರಡು ಸಾಲಾಗಿ ಎರಕ ಹೊಯ್ಸಿದನು.