2 Chronicles 6:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇಸ್ರೇಲರ ದೇವರಾದ ಯೆಹೋವನೇ, ನೀನು ನನ್ನ ತಂದೆಯಾದ ದಾವೀದನಿಗೆ, ‘ನಿನ್ನ ಸಂತಾನದವರು ನಿನ್ನಂತೆ ನನ್ನ ಆಜ್ಞೆಗಳಿಗೆ ವಿಧೇಯರಾಗಿದ್ದರೆ, ನಿನ್ನ ಸಂತಾನದವರೇ ಇಸ್ರೇಲ್ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು.’ ಎಂದು ವಾಗ್ದಾನ ಮಾಡಿದೆಯಲ್ಲಾ?
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸ್ರಾಯೇಲರ ದೇವರಾದ ಯೆಹೋವನೇ, ನೀನು ನಿನ್ನ ಸೇವಕನೂ, ನನ್ನ ತಂದೆಯೂ ಆದ ದಾವೀದನಿಗೆ, ‘ನಿನ್ನ ಸಂತಾನದವರು ನಿನ್ನಂತೆ ಜಾಗರೂಕತೆಯಿಂದ ನನ್ನ ಕಟ್ಟಳೆಯನ್ನು ಅನುಸರಿಸಿ ನಡೆದುಕೊಳ್ಳುವುದಾದರೆ ಅವರು ತಪ್ಪದೆ ಇಸ್ರಾಯೇಲರ ಸಿಂಹಾಸನದ ಮೇಲೆ ಕುಳಿತುಕೊಳ್ಳುವಂತೆ ಮಾಡುವೆನು ಎಂಬುದಾಗಿ ವಾಗ್ದಾನ ಮಾಡಿರುವೆಯಲ್ಲಾ, ಅದನ್ನು ನೆರವೇರಿಸು.’
Kannada BSI Bible 2016
ಆದಕಾರಣ ಇಸ್ರಾಯೇಲಿನ ದೇವರಾದ ಓ ಕರ್ತನೇ,--ನಿನ್ನ ಮಕ್ಕಳು ತಮ್ಮ ಮಾರ್ಗಕ್ಕೆ ಜಾಗ್ರತೆಯಾಗಿದ್ದು ನೀನು ನನ್ನ ಮುಂದೆ ನಡೆದ ಹಾಗೆ ಅವರು ನನ್ನ ನ್ಯಾಯ ಪ್ರಮಾಣದ ಪ್ರಕಾರ ನಡೆದರೆ ಇಸ್ರಾಯೇಲಿನ ಸಿಂಹಾಸನದ ಮೇಲೆ ನನ್ನ ಸಮ್ಮುಖದಲ್ಲಿ ಕುಳಿತುಕೊ ಳ್ಳಲು ನಿನಗೆ ಮನುಷ್ಯನು ಕೊರತೆಯಾಗುವದಿಲ್ಲವೆಂದು ನೀನು ನನ್ನ ತಂದೆಯೂ ನಿನ್ನ ಸೇವಕನೂ ದಾವೀದನಿಗೆ ಹೇಳಿದ್ದನ್ನು ನಡಿಸು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಸ್ರಾಯೇಲ್‍ದೇವರಾದ ಯೆಹೋವನೇ, ನೀನು ನನ್ನ ತಂದೆಯಾದ ದಾವೀದನಿಗೆ - ನಿನ್ನ ಸಂತಾನದವರು ನಿನ್ನಂತೆ ಜಾಗರೂಕತೆಯಿಂದ ನನ್ನ ಕಟ್ಟಳೆಯನ್ನು ಅನುಸರಿಸಿ ನಡೆದುಕೊಳ್ಳುವದಾದರೆ ಅವರು ತಪ್ಪದೆ ಇಸ್ರಾಯೇಲ್ ಸಿಂಹಾಸನದ ಮೇಲೆ ಕೂತುಕೊಳ್ಳುವಂತೆ ಮಾಡುವೆನು ಎಂಬದಾಗಿ ವಾಗ್ದಾನಮಾಡಿದಿಯಲ್ಲಾ, ಅದನ್ನು ನೆರವೇರಿಸು.
Kannada Bible (KNCL) BSI 2016
ಇಸ್ರಯೇಲ್ ದೇವರಾದ ಸರ್ವೇಶ್ವರಾ, ನೀವು ನನ್ನ ತಂದೆ ದಾವೀದನಿಗೆ, ‘ನಿನ್ನ ಸಂತಾನದವರು ನಿನ್ನಂತೆ ಜಾಗರೂಕತೆಯಿಂದ ನನ್ನ ಕಟ್ಟಳೆಯನ್ನು ಅನುಸರಿಸಿ ನನ್ನ ಮಾರ್ಗದಲ್ಲಿ ನಡೆದುಕೊಂಡರೆ ಅವರು ಇಸ್ರಯೇಲ್ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದು ತಪ್ಪದು’ ಎಂಬುದಾಗಿ ವಾಗ್ದಾನ ಮಾಡಿದ್ದೀರಿ; ಅದನ್ನು ನೆರವೇರಿಸಿರಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಆದಕಾರಣ, ಈಗ ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ‘ನಿಮ್ಮ ಸಂತಾನದವರು, ನಿನ್ನಂತೆ ಜಾಗ್ರತೆಯಾಗಿದ್ದು, ನನ್ನ ನಿಯಮದ ಪ್ರಕಾರ ನಡೆದುಕೊಳ್ಳುವದಾದರೆ, ಅವರು ತಪ್ಪದೆ ಇಸ್ರಾಯೇಲಿನ ಸಿಂಹಾಸನದ ಮೇಲೆ ನನ್ನ ಸಮ್ಮುಖದಲ್ಲಿ ಕುಳಿತುಕೊಳ್ಳುವರು,’ ಎಂದು ನೀವು ನನ್ನ ತಂದೆಯಾದ ನಿಮ್ಮ ಸೇವಕನಾದ ದಾವೀದನಿಗೆ ವಾಗ್ದಾನ ಮಾಡಿದ್ದನ್ನು ನೆರವೇರಿಸಿರಿ.