2 Chronicles 6:23 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅದನ್ನು ನೀನು ಪರಲೋಕದಿಂದ ಆಲೈಸಿ ನಿನ್ನ ಸೇವಕರ ನ್ಯಾಯತೀರಿಸು. ಕೇಡುಮಾಡಿದವನನ್ನು ಶಿಕ್ಷಿಸು; ಅವನು ಇನ್ನೊಬ್ಬನಿಗೆ ಮಾಡಿದ ದುಷ್ಕೃತ್ಯವು ಅವನಿಗೇ ತಟ್ಟುವಂತೆ ಮಾಡು. ಯಾವನು ನಿರಪರಾಧಿಯೆಂಬುದನ್ನು ತೋರಿಸಿಕೊಟ್ಟು ಅವನ ನೀತಿಗೆ ತಕ್ಕಂತೆ ಪ್ರತಿಫಲ ಕೊಡು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ನೀನು ಪರಲೋಕದಿಂದ ಅದನ್ನು ಕೇಳಿ ನಿನ್ನ ಸೇವಕರ ವ್ಯಾಜ್ಯವನ್ನು ತೀರಿಸು; ದುಷ್ಟನಿಗೆ ಅವನ ದುಷ್ಟತ್ವವನ್ನು ಅವನ ತಲೆಯ ಮೇಲೆಯೇ ಬರಮಾಡಿ ಮುಯ್ಯಿತೀರಿಸು; ನೀತಿವಂತನಿಗೆ ಅವನ ನೀತಿಯ ಫಲವನ್ನು ಅನುಗ್ರಹಿಸಿ ಅವನು ನೀತಿವಂತನೆಂದು ತೋರಿಸಿಕೊಡು.
Kannada BSI Bible 2016
ಈ ಆಲಯದಲ್ಲಿ ನಿನ್ನ ಬಲಿಪೀಠದ ಮುಂದೆ ಈ ಆಣೆ ಬಂದರೆ ನೀನೇ ದುಷ್ಟನ ಮಾರ್ಗವನ್ನು ಅವನ ತಲೆಯ ಮೇಲೆ ಬರ ಮಾಡಿ ಅವನಿಗೆ ಬದಲು ಕೊಡುವ ಹಾಗೆಯೂ ನೀತಿವಂತನನ್ನು ನೀತಿವಂತನಾಗಿ ಮಾಡಿ ಅವನ ನೀತಿಯ ಪ್ರಕಾರ ಅವನಿಗೆ ಕೊಡುವ ಹಾಗೆಯೂ ನೀನು ಆಕಾಶದಿಂದ ಕೇಳಿ ನಡಿಸಿ ನಿನ್ನ ಸೇವಕರ ನ್ಯಾಯವನ್ನು ತೀರಿಸು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ಪರಲೋಕದಿಂದ ಅದನ್ನು ಕೇಳಿ ನಿನ್ನ ಸೇವಕರ ವ್ಯಾಜ್ಯವನ್ನು ತೀರಿಸು; ದುಷ್ಟನಿಗೆ ಅವನ ದುಷ್ಟತ್ವವನ್ನು ಅವನ ತಲೆಯ ಮೇಲೆಯೇ ಬರಮಾಡಿ ಮುಯ್ಯಿತೀರಿಸು; ನೀತಿವಂತನಿಗೆ ಅವನ ನೀತಿಯ ಫಲವನ್ನು ಅನುಗ್ರಹಿಸಿ ಅವನು ನೀತಿವಂತನೆಂದು ತೋರಿಸಿಕೊಡು.
Kannada Bible (KNCL) BSI 2016
ನೀವು ಪರಲೋಕದಿಂದ ಅದನ್ನು ಕೇಳಿ ನಿಮ್ಮ ಭಕ್ತರ ವ್ಯಾಜ್ಯವನ್ನು ತೀರಿಸಿರಿ. ದುಷ್ಟನನ್ನು ಖಂಡಿಸಿ ಅವನ ತಪ್ಪನ್ನು ಅವನ ಮೇಲೆಯೇ ಹೊರಿಸಿರಿ; ಅವನು ಅಪರಾಧಿಯೆಂದು ತೋರಿಸಿಕೊಡಿ. ನೀತಿವಂತನಿಗೆ ಅವನ ನೀತಿಯ ಫಲವನ್ನು ಅನುಗ್ರಹಿಸಿ, ಅವನು ನೀತಿವಂತನೆಂದು ತೋರಿಸಿಕೊಡಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀವೇ ಆ ಅಪರಾಧಿಯನ್ನು ಖಂಡಿಸಿ ಅವನ ತಪ್ಪನ್ನು ಅವನ ತಲೆಯ ಮೇಲೆಯೇ ಹೊರಿಸಿರಿ; ಅವನು ಅಪರಾಧಿಯೆಂದು ತೋರಿಸಿಕೊಡಿರಿ. ನಿರ್ದೋಷಿಯಾಗಿದ್ದರೆ ಅವನ ನೀತಿಯ ಫಲವನ್ನು ಅನುಗ್ರಹಿಸಿ ಅವನು ನೀತಿವಂತನೆಂದು ತೋರಿಸಿಕೊಡುವ ಹಾಗೆ ಪರಲೋಕದಲ್ಲಿರುವ ನೀವು ಅದನ್ನು ಕೇಳಿ, ನಿಮ್ಮ ಸೇವಕರ ನ್ಯಾಯವನ್ನು ತೀರಿಸಿರಿ.