2 Chronicles 6:34 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ನೀನು ನಿನ್ನ ಜನರನ್ನು ಅವರ ವೈರಿಗಳ ವಿರುದ್ಧವಾಗಿ ಯುದ್ಧಮಾಡಲು ಒಂದು ಸ್ಥಳಕ್ಕೆ ಕಳುಹಿಸುವಾಗ ನೀನು ಆರಿಸಿಕೊಂಡ ಈ ಪಟ್ಟಣದ ಕಡೆಗೂ ನಿನ್ನ ಹೆಸರಿಗಾಗಿ ನಾನು ಕಟ್ಟಿದ ಈ ದೇವಾಲಯದ ಕಡೆಗೂ ಅವರು ತಿರುಗಿಕೊಂಡು ನಿನಗೆ ಪ್ರಾರ್ಥಿಸಿದರೆ
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ನೀನು ನಿನ್ನ ಜನರನ್ನು ಶತ್ರುಗಳೊಡನೆ ಯುದ್ಧ ಮಾಡುವುದಕ್ಕಾಗಿ ಎಲ್ಲಿಗಾದರೂ ಕಳುಹಿಸಿದಾಗ, ಅವರು ಅಲ್ಲಿಂದ ನೀನು ಆರಿಸಿಕೊಂಡ ಪಟ್ಟಣದ ಕಡೆಗೂ, ನಾನು ನಿನ್ನ ಹೆಸರಿನಲ್ಲಿ ಕಟ್ಟಿಸಿರುವ ಈ ಆಲಯದ ಕಡೆಗೂ ತಿರುಗಿಕೊಂಡು ನಿನ್ನನ್ನು ಪ್ರಾರ್ಥಿಸಿದರೆ,
Kannada BSI Bible 2016
ನಿನ್ನ ಜನರು ನೀನು ಅಟ್ಟಿಬಿಡುವ ಯಾವ ಸ್ಥಳ ದಲ್ಲಾದರೂ ತಮ್ಮ ಶತ್ರುಗಳ ಸಂಗಡ ಯುದ್ಧ ಮಾಡಲು ಹೊರಟು ಹೋಗಿ ನೀನು ಆದುಕೊಂಡ ಪಟ್ಟಣದ ಮಾರ್ಗವಾಗಿಯೂ ನಾನು ನಿನ್ನ ಹೆಸರಿಗೆ ಕಟ್ಟಿಸಿದ ಈ ಆಲಯದ ಮಾರ್ಗವಾಗಿಯೂ ಅವರು ನಿನಗೆ ಪ್ರಾರ್ಥನೆ ಮಾಡಿದರೆ
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ನಿನ್ನ ಜನರನ್ನು ಶತ್ರುಗಳೊಡನೆ ಯುದ್ಧಮಾಡುವದಕ್ಕೋಸ್ಕರ ಎಲ್ಲಿಗಾದರೂ ಕಳುಹಿಸಿದಾಗ ಅವರು ಅಲ್ಲಿಂದ ನೀನು ಆರಿಸಿಕೊಂಡ ಪಟ್ಟಣದ ಕಡೆಗೂ ನಾನು ನಿನ್ನ ಹೆಸರಿಗಾಗಿ ಕಟ್ಟಿಸಿದ ಈ ಆಲಯದ ಕಡೆಗೂ ತಿರುಗಿಕೊಂಡು ನಿನ್ನನ್ನು ಪ್ರಾರ್ಥಿಸುವದಾದರೆ
Kannada Bible (KNCL) BSI 2016
“ನೀವು ನಿಮ್ಮ ಜನರನ್ನು ಶತ್ರುಗಳೊಡನೆ ಯುದ್ಧಮಾಡುವುದಕ್ಕೆ ಎಲ್ಲಿಗಾದರೂ ಕಳುಹಿಸಿದಾಗ ಅವರು ಅಲ್ಲಿಂದ ನೀವು ಆರಿಸಿಕೊಂಡ ಪಟ್ಟಣದ ಕಡೆಗೂ ನಾನು ನಿಮ್ಮ ಹೆಸರಿಗಾಗಿ ಕಟ್ಟಿಸಿದ ಆ ಆಲಯದ ಕಡೆಗೂ ತಿರುಗಿಕೊಂಡು ನಿಮ್ಮನ್ನು ಪ್ರಾರ್ಥಿಸಿದರೆ,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ನೀವು ನಿಮ್ಮ ಜನರನ್ನು ತಮ್ಮ ಶತ್ರುಗಳ ಸಂಗಡ ಯುದ್ಧಮಾಡುವದಕ್ಕೆ ಎಲ್ಲಿಗಾದರೂ ಕಳುಹಿಸಿದಾಗ, ಅವರು ಅಲ್ಲಿಂದ ನೀವು ಆಯ್ದುಕೊಂಡ ಪಟ್ಟಣದ ಕಡೆಗೂ, ನಾನು ನಿಮ್ಮ ಹೆಸರಿಗಾಗಿ ಕಟ್ಟಿಸಿದ ಈ ಆಲಯದ ಕಡೆಗೂ ತಿರುಗಿಕೊಂಡು, ಅವರು ನಿಮಗೆ ಪ್ರಾರ್ಥನೆಮಾಡಿದರೆ,