2 Chronicles 6:39 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಿನ್ನ ವಾಸಸ್ಥಾನವಾಗಿರುವ ಪರಲೋಕದಿಂದ ನೀನು ಅವರ ಪ್ರಾರ್ಥನೆಯನ್ನು ಕೇಳಿ ಅವರಿಗೆ ಸಹಾಯಮಾಡು. ನಿನಗೆ ವಿರುದ್ಧವಾಗಿ ಪಾಪಮಾಡಿದವರನ್ನು ಕ್ಷಮಿಸು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ನಿನ್ನ ನಿವಾಸವಾಗಿರುವ ಪರಲೋಕದಿಂದ ಅವರ ಪ್ರಾರ್ಥನೆಯನ್ನು, ವಿಜ್ಞಾಪನೆಯನ್ನು ಆಲಿಸಿ, ಅವರಿಗೆ ನ್ಯಾಯವನ್ನು ಪಾಲಿಸಿ ನಿನಗೆ ವಿರುದ್ಧವಾಗಿ ಪಾಪಮಾಡಿದ ನಿನ್ನ ಪ್ರಜೆಗಳಿಗೆ ಕ್ಷಮೆಯನ್ನು ಅನುಗ್ರಹಿಸು.
Kannada BSI Bible 2016
ನೀನು ಆಕಾಶದಲ್ಲಿ ವಾಸಮಾಡುವ ಸ್ಥಳದಿಂದ ಅವರ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಕೇಳಿ ಅವರ ನ್ಯಾಯವನ್ನು ತೀರಿಸಿ ನಿನ್ನ ಜನರು ನಿನಗೆ ವಿರೋಧವಾಗಿ ಮಾಡಿದ ಪಾಪಗಳನ್ನು ಮನ್ನಿಸು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ನಿನ್ನ ನಿವಾಸವಾಗಿರುವ ಪರಲೋಕದಿಂದ ಅವರ ವಿಜ್ಞಾಪನೆಯನ್ನೂ ಪ್ರಾರ್ಥನೆಯನ್ನೂ ಲಾಲಿಸಿ ಅವರ ನ್ಯಾಯವನ್ನು ಸ್ಥಾಪಿಸಿ ನಿನಗೆ ವಿರುದ್ಧವಾಗಿ ಪಾಪಮಾಡಿದ ನಿನ್ನ ಪ್ರಜೆಗೆ ಕ್ಷಮೆಯನ್ನು ಅನುಗ್ರಹಿಸು.
Kannada Bible (KNCL) BSI 2016
ನೀವು ನಿಮ್ಮ ನಿವಾಸವಾಗಿರುವ ಪರಲೋಕದಿಂದ ಅವರ ವಿಜ್ಞಾಪನೆಯನ್ನೂ ಪ್ರಾರ್ಥನೆಯನ್ನೂ ಆಲಿಸಿ, ಅವರಿಗೆ ದಯೆ ತೋರಿಸಿ, ನಿಮಗೆ ವಿರುದ್ಧ ಪಾಪಮಾಡಿದ ನಿಮ್ಮ ಪ್ರಜೆಗೆ ಕ್ಷಮೆಯನ್ನು ಅನುಗ್ರಹಿಸಿರಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ನೀವು ವಾಸಮಾಡುವ ಪರಲೋಕದಿಂದ ಅವರ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಕೇಳಿ ಅವರ ನ್ಯಾಯವನ್ನು ತೀರಿಸಿರಿ, ನಿಮ್ಮ ಜನರು ನಿಮಗೆ ವಿರೋಧವಾಗಿ ಮಾಡಿದ ಪಾಪಗಳನ್ನು ಕ್ಷಮಿಸಿರಿ.