2 Chronicles 6:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಇಸ್ರೇಲಿನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ಆತನು ನನ್ನ ತಂದೆಯಾದ ದಾವೀದನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸಿದ್ದಾನೆ. ಆತನು ದಾವೀದನಿಗೆ,
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ಹೇಳಿದ್ದೇನೆಂದರೆ, “ಇಸ್ರಾಯೇಲರ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ; ನನ್ನ ತಂದೆಯಾದ ದಾವೀದನಿಗೆ ವಾಗ್ದಾನ ಮಾಡಿದಂತೆ ಈಗ ತನ್ನಿಂದ ನೆರವೇರಿಸುವಂತೆ ಮಾಡಿದ್ದಾನೆ.
Kannada BSI Bible 2016
ಅವನು--ನನ್ನ ತಂದೆಯಾದ ದಾವೀದನ ಸಂಗಡ ಮಾತನಾಡಿದ್ದನ್ನು ತನ್ನ ಕೈಯಿಂದ ನೆರವೇರಿಸಿದ ಇಸ್ರಾಯೇಲ್ಯರ ದೇವರಾದ ಕರ್ತನು ಸ್ತುತಿಸಲ್ಪಡಲಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಸ್ರಾಯೇಲ್‍ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ; ನನ್ನ ತಂದೆಯಾದ ದಾವೀದನಿಗೆ ಆತನ ಬಾಯಿ ನುಡಿದದ್ದನ್ನು ಆತನ ಹಸ್ತವು ಈಗ ನೆರವೇರಿಸಿಯದೆ.
Kannada Bible (KNCL) BSI 2016
“ಇಸ್ರಯೇಲಿನ ದೇವರಾದ ಸರ್ವೇಶ್ವರನಿಗೆ ಸ್ತೋತ್ರವಾಗಲಿ! ನನ್ನ ತಂದೆ ದಾವೀದನಿಗೆ ಅವರು ಬಾಯಿಂದ ನುಡಿದದ್ದನ್ನು ಈಗ ಕೈಯಿಂದ ನೆರವೇರಿಸಿದ್ದಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಂತರ ಅರಸನು ಹೀಗೆ ಹೇಳಿದನು: “ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಸ್ತೋತ್ರವಾಗಲಿ. ಅವರು ನನ್ನ ತಂದೆಯಾದ ದಾವೀದನಿಗೆ ತಮ್ಮ ಬಾಯಿಂದ ವಾಗ್ದಾನ ಮಾಡಿದ್ದನ್ನು, ತಮ್ಮ ಕೈಗಳಿಂದಲೇ ನೆರವೇರಿಸಿದರು.