2 Chronicles 7:10 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಏಳನೆಯ ತಿಂಗಳಿನ ಇಪ್ಪತ್ತಮೂರನೆಯ ದಿನದಂದು ಸೊಲೊಮೋನನು ನೆರೆದು ಬಂದಿದ್ದ ಜನರನ್ನು ಅವರ ಮನೆಗಳಿಗೆ ಕಳುಹಿಸಿದನು. ದೇವರಾದ ಯೆಹೋವನು ದಾವೀದನಿಗೂ ಅವನ ಮಗನಾದ ಸೊಲೊಮೋನನಿಗೂ ಮತ್ತು ಎಲ್ಲಾ ಇಸ್ರೇಲರಿಗೂ ಕರುಣೆಯನ್ನು ತೋರಿಸಿದ್ದಕ್ಕಾಗಿ ಜನರೆಲ್ಲರೂ ಹರ್ಷಿಸುತ್ತಾ ತಮ್ಮತಮ್ಮ ಮನೆಗಳಿಗೆ ಹಿಂತಿರುಗಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಏಳನೆಯ ತಿಂಗಳಿನ ಇಪ್ಪತ್ತ ಮೂರನೆಯ ದಿನದಲ್ಲಿ, ಅರಸನು ಜನರಿಗೆ ಅಪ್ಪಣೆಕೊಡಲು ಅವರು ಯೆಹೋವನಿಂದ ದಾವೀದ, ಸೊಲೊಮೋನರಿಗೂ, ಆತನ ಪ್ರಜೆಗಳಾದ ಇಸ್ರಾಯೇಲರಿಗೂ ಉಂಟಾದ ಉಪಕಾರಗಳನ್ನು ನೆನಪುಮಾಡಿಕೊಂಡು ಆನಂದಭರಿತರಾಗಿ, ಸಂತೋಷಿಸುತ್ತಾ ತಮ್ಮ ತಮ್ಮ ನಿವಾಸಗಳಿಗೆ ಹೊರಟು ಹೋದರು.
Kannada BSI Bible 2016
ಏಳನೇ ತಿಂಗಳಿನ ಇಪ್ಪತ್ತ ಮೂರನೇ ದಿವಸದಲ್ಲಿ ಅವನು ಜನರನ್ನು ತಮ್ಮ ಡೇರೆ ಗಳಿಗೆ ಕಳುಹಿಸಿಬಿಟ್ಟನು. ಕರ್ತನು ದಾವೀದನಿಗೂ ಸೊಲೊಮೋನನಿಗೂ ತನ್ನ ಜನವಾದ ಇಸ್ರಾಯೇ ಲಿಗೂ ಮಾಡಿದ ಉಪಕಾರಕ್ಕೋಸ್ಕರ ಅವರು ಹೃದಯ ದಲ್ಲಿ ಆನಂದವಾಗಿ ಸಂತೋಷಪಡುತ್ತಾ ಹೋದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಏಳನೆಯ ತಿಂಗಳಿನ ಇಪ್ಪತ್ತಮೂರನೆಯ ದಿನದಲ್ಲಿ ಅರಸನು ಜನರಿಗೆ ಅಪ್ಪಣೆಕೊಡಲು ಅವರು ಯೆಹೋವನಿಂದ ದಾವೀದ ಸೊಲೊಮೋನರಿಗೂ ಆತನ ಪ್ರಜೆಗಳಾದ ಇಸ್ರಾಯೇಲ್ಯರಿಗೂ ಉಂಟಾದ ಉಪಕಾರಗಳನ್ನು ನೆನಸಿಕೊಂಡು ಆನಂದಭರಿತರಾಗಿ ಹರ್ಷಿಸುತ್ತಾ ತಮ್ಮ ತಮ್ಮ ನಿವಾಸಗಳಿಗೆ ಹೋದರು.
Kannada Bible (KNCL) BSI 2016
ಏಳನೆಯ ತಿಂಗಳಿನ ಇಪ್ಪತ್ತಮೂರನೆಯ ದಿನ ಅರಸನು ಜನರಿಗೆ ಅಪ್ಪಣೆಕೊಟ್ಟನು; ಅವರು ದಾವೀದ - ಸೊಲೊಮೋನರಿಗೂ ಪ್ರಜೆಗಳಾದ ಇಸ್ರಯೇಲರಿಗೂ ಸರ್ವೇಶ್ವರ ಮಾಡಿದ ಉಪಕಾರಗಳನ್ನು ನೆನಸಿಕೊಂಡು, ಆನಂದಭರಿತರಾಗಿ ಹರ್ಷಿಸುತ್ತಾ, ತಮ್ಮ ತಮ್ಮ ನಿವಾಸಗಳಿಗೆ ಹಿಂದಿರುಗಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏಳನೆಯ ತಿಂಗಳಿನ ಇಪ್ಪತ್ತಮೂರನೆಯ ದಿವಸದಲ್ಲಿ ಅವನು ಜನರಿಗೆ ಅವರವರ ಡೇರೆಗಳಿಗೆ ಹೋಗುವುದಕ್ಕೆ ಅಪ್ಪಣೆಕೊಡಲು, ಆಗ ಅವರು ಯೆಹೋವ ದೇವರು ದಾವೀದನಿಗೂ, ಸೊಲೊಮೋನನಿಗೂ, ತನ್ನ ಜನರಾದ ಇಸ್ರಾಯೇಲರಿಗೂ ಮಾಡಿದ ಉಪಕಾರದ ನಿಮಿತ್ತ ಅವರು ಹೃದಯದಲ್ಲಿ ಆನಂದಭರಿತರಾಗಿ ಸಂತೋಷಪಡುತ್ತಾ ಹೋದರು.