2 Chronicles 7:11 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸೊಲೊಮೋನನು ತಾನು ಯೋಜಿಸಿದ ರೀತಿಯಲ್ಲಿ ದೇವಾಲಯವನ್ನೂ ಅರಮನೆಯನ್ನೂ ಕಟ್ಟಿ ಮುಗಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸೊಲೊಮೋನನು ಯೆಹೋವನ ಆಲಯವನ್ನೂ, ತನ್ನ ಅರಮನೆಯನ್ನೂ ಕಟ್ಟಿಸಿ, ಆ ಕಟ್ಟಡಗಳ ವಿಷಯವಾಗಿ ತನ್ನ ಹೃದಯದಲ್ಲಿದ್ದ ಎಲ್ಲವನ್ನೂ ಅರಸನು ಈಡೇರಿಸಿದನು.
Kannada BSI Bible 2016
ಹೀಗೆಯೇ ಸೊಲೊಮೋನನು ಕರ್ತನ ಆಲಯ ವನ್ನೂ ಅರಸನ ಮನೆಯನ್ನೂ ಕಟ್ಟಿಸಿ ಮುಗಿಸಿದನು. ಕರ್ತನ ಆಲಯದಲ್ಲಿಯೂ ತನ್ನ ಮನೆಯಲ್ಲಿಯೂ ಮಾಡಲು ಸೊಲೊಮೋನನ ಹೃದಯದಲ್ಲಿ ಬಂದ ದ್ದನ್ನೆಲ್ಲಾ ಅವನು ಸಫಲವಾಗುವಂತೆ ಸಾಧಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸೊಲೊಮೋನನು ಯೆಹೋವನ ಆಲಯವನ್ನೂ ತನ್ನ ಅರಮನೆಯನ್ನೂ ಕಟ್ಟಿಸಿ ಆ ಕಟ್ಟಡಗಳ ವಿಷಯವಾಗಿ ತನ್ನ ಮನಸ್ಸಿನಲ್ಲಿದ್ದದನ್ನೆಲ್ಲಾ ಕೊನೆಗಾಣಿಸಿದ ನಂತರ
Kannada Bible (KNCL) BSI 2016
ಸೊಲೊಮೋನನು ಸರ್ವೇಶ್ವರನ ಆಲಯವನ್ನೂ ತನ್ನ ಅರಮನೆಯನ್ನೂ ಕಟ್ಟಿಸಿ, ಆ ಕಟ್ಟಡಗಳ ವಿಷಯವಾಗಿ ತನ್ನ ಮನಸ್ಸಿನಲ್ಲಿ ಇದ್ದ ಯೋಜನೆಯನ್ನು ಈಡೇರಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸೊಲೊಮೋನನು ಯೆಹೋವ ದೇವರ ಆಲಯವನ್ನೂ, ಅರಮನೆಯನ್ನೂ ಕಟ್ಟಿಸಿ ತೀರಿಸಿದನು. ಅವನು ಯೆಹೋವ ದೇವರ ಆಲಯದಲ್ಲಿಯೂ, ತನ್ನ ಅರಮನೆಯಲ್ಲಿಯೂ ಮಾಡಬೇಕಾದ ತನ್ನ ಮನಸ್ಸಿನಲ್ಲಿ ಇದ್ದ ಯೋಜನೆಯನ್ನು ಈಡೇರಿಸುವಲ್ಲಿ ಯಶಸ್ವಿಯಾದನು.