2 Chronicles 8:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಮೇಲಿನ ಬೇತ್ಹೋರೋನ್ ಮತ್ತು ಕೆಳಗಿನ ಬೇತ್ಹೋರೋನ್ ಎಂಬ ನಗರಗಳನ್ನು ಸೊಲೊಮೋನನು ಬಲವಾದ ಕೋಟೆಯ ನಗರಗಳನ್ನಾಗಿ ಮತ್ತೆ ಕಟ್ಟಿದನು. ಆ ನಗರಗಳನ್ನು ಕೋಟೆ, ಕದ ಮತ್ತು ಹೆಬ್ಬಾಗಿಲುಗಳಿಂದ ಬಲಗೊಳಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದಲ್ಲದೆ ಮೇಲಿನ ಮತ್ತು ಕೆಳಗಿನ ಬೇತ್ಹೋರೋನ್ ಎಂಬ ಪಟ್ಟಣಗಳಿಗೆ ಪೌಳಿಗೋಡೆ, ಬಾಗಿಲು, ಅಗುಳಿ ಇವುಗಳನ್ನು ಸಿದ್ಧಪಡಿಸಿ ಕೋಟೆಗಳನ್ನಾಗಿ ಮಾಡಿಕೊಂಡನು.
Kannada BSI Bible 2016
ಗೋಡೆಗಳೂ ಬಾಗಲುಗಳೂ ಅಗುಳಿಗಳೂ ಉಳ್ಳ ಕೋಟೆ ಪಟ್ಟಣಗಳಾದ ಮೇಲಿನ ಬೇತ್ಹೋರೋನನ್ನೂ ಕೆಳಗಿನ ಬೇತ್ಹೋರೋನನ್ನೂ ಬಾಲಾತೂರನ್ನೂ ಸೊಲೊಮೋನನಿಗೆ ಇದ್ದ ಸಮಸ್ತ ಉಗ್ರಾಣದ ಪಟ್ಟಣಗಳನ್ನೂ ಸಮಸ್ತ ರಥಗಳ ಪಟ್ಟಣ ಗಳನ್ನೂ ರಾಹುತರ ಪಟ್ಟಣಗಳನ್ನೂ ಕಟ್ಟಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದಲ್ಲದೆ ಮೇಲಿನ ಮತ್ತು ಕೆಳಗಿನ ಬೇತ್ಹೋರೋನ್ ಎಂಬ ಊರುಗಳನ್ನು ಪೌಳಿಗೋಡೆ ಕದ ಅಗುಳಿ ಇವುಗಳನ್ನು ಏರ್ಪಡಿಸಿ ಕೋಟೆಗಳನ್ನಾಗಿ ಮಾಡಿದನು.
Kannada Bible (KNCL) BSI 2016
ಮೇಲಿನ ಮತ್ತು ಕೆಳಗಿನ ಬೇತ್ಹೋರೋನ್ ಎಂಬ ಊರುಗಳಿಗೆ ಪೌಳಿಗೋಡೆ, ಕದ, ಅಗುಳಿ ಇವುಗಳನ್ನು ಏರ್ಪಡಿಸಿ ಕೋಟೆಗಳನ್ನಾಗಿ ಮಾರ್ಪಡಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇವುಗಳಲ್ಲದೆ, ಮೇಲಿನ ಬೇತ್ ಹೋರೋನ್ ಮತ್ತು ಕೆಳಗಿನ ಬೇತ್ ಹೋರೋನ್ ಪಟ್ಟಣಗಳನ್ನು ಪುನಃ ನಿರ್ಮಿಸಿದನು. ಈ ಪಟ್ಟಣಗಳು ಬಲವಾದ ಗೋಡೆಗಳು, ಬಾಗಿಲುಗಳು ಮತ್ತು ಅಗುಳಿಗಳು ಉಳ್ಳ ಕೋಟೆ ಪಟ್ಟಣಗಳಾಗಿ ಸೊಲೊಮೋನನು ಕಟ್ಟಿಸಿದನು.