2 Chronicles 9:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸೊಲೊಮೋನನು ಒಂದು ವರ್ಷದಲ್ಲಿ ಇಪ್ಪತ್ತೆರಡು ಸಾವಿರದ ಒಂಭೈನೂರ ಎಪ್ಪತ್ತೇಳು ಕಿಲೋಗ್ರಾಂ ಬಂಗಾರವನ್ನು ಸಂಗ್ರಹಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸೊಲೊಮೋನನಿಗೆ ಪ್ರತಿ ವರ್ಷ ಆರು ನೂರಅರವತ್ತಾರು ತಲಾಂತು ಬಂಗಾರವು ದೊರಕುತ್ತಿತ್ತು.
Kannada BSI Bible 2016
ಆದರೆ ವರ್ತಕರೂ ವ್ಯಾಪಾರಸ್ಥರೂ ತಂದದ್ದು ಹೊರತಾಗಿ ಒಂದು ವರುಷದಲ್ಲಿ ಸೊಲೊಮೋನನಿಗೆ ಬಂದ ಬಂಗಾರದ ತೂಕವು ಆರುನೂರ ಅರವತ್ತಾರು ತಲಾಂತು ತೂಕ ಬಂಗಾರವಾಗಿತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸೊಲೊಮೋನನಿಗೆ ದೇಶಾಂತರವ್ಯಾಪಾರಿಗಳೂ ವರ್ತಕರೂ ಅರಬಸ್ಥಾನದ ಅರಸರೂ ದೇಶಾಧಿಪತಿಗಳೂ ತೆರುತ್ತಿದ್ದ ಬೆಳ್ಳಿಬಂಗಾರವಲ್ಲದೆ
Kannada Bible (KNCL) BSI 2016
ಸೊಲೊಮೋನನಿಗೆ ದೇಶಾಂತರ ವ್ಯಾಪಾರಿಗಳು, ವರ್ತಕರು, ಅರೇಬಿಯ ಅರಸರು ಹಾಗೂ ದೇಶಾಧಿಪತಿಗಳು ತರುತ್ತಿದ್ದ ಬೆಳ್ಳಿಬಂಗಾರವಲ್ಲದೆ,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸೊಲೊಮೋನನಿಗೆ ಪ್ರತಿ ವರುಷ ಸುಮಾರು ಇಪ್ಪತ್ತಮೂರು ಸಾವಿರ ಕಿಲ್ರೊಗ್ರಾಂ ಬಂಗಾರವು ದೊರಕುತ್ತಿತ್ತು.