2 Chronicles 9:18 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸಿಂಹಾಸನವನ್ನು ಹತ್ತಲು ಆರು ಮೆಟ್ಟಲುಗಳಿದ್ದವು. ಅದಕ್ಕೆ ಬಂಗಾರದಿಂದ ಮಾಡಿದ ಪಾದಪೀಠವಿತ್ತು. ಸಿಂಹಾಸನದ ಎರಡು ಕಡೆಗಳಲ್ಲೂ ಕೈಗಳನ್ನಿಡಲು ಏರ್ಪಾಟು ಮಾಡಲಾಗಿತ್ತು; ಅವುಗಳ ಸಮೀಪದಲ್ಲಿ ಎರಡು ಸಿಂಹಗಳ ಆಕೃತಿಯನ್ನು ಮಾಡಿಟ್ಟಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಕ್ಕೆ ಹೊಂದಿಕೆಯಾದ ಆರು ಮೆಟ್ಟಲುಗಳೂ, ಬಂಗಾರದ ಸಿಂಹಾಸನವೂ, ಒಂದು ಪಾದಪೀಠವು ಇದ್ದವು; ಆಸನಕ್ಕೆ ಎರಡು ಕೈಗಳೂ ಅವುಗಳ ಹತ್ತಿರ ಎರಡು ಸಿಂಹಗಳೂ ಇದ್ದವು.
Kannada BSI Bible 2016
ಈ ಸಿಂಹಾಸನಕ್ಕೆ ಆರು ಮೆಟ್ಟಲುಗಳು ಇದ್ದವು. ಸಿಂಹಾಸನಕ್ಕೆ ತಗಲಿಸಲ್ಪಟ್ಟ ಬಂಗಾರದ ಪಾದ ಪೀಠ ಇತ್ತು. ಕುಳಿತುಕೊಳ್ಳುವ ಸ್ಥಳದ ಎರಡು ಪಾರ್ಶ್ವ ದಲ್ಲಿಯೂ ಕೈಗಳಿದ್ದವು; ಆ ಕೈಗಳ ಬಳಿಯಲ್ಲಿ ಎರಡು ಸಿಂಹಗಳು ನಿಂತಿದ್ದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಕ್ಕೆ ಹೊಂದಿಕೆಯಾಗಿ ಆರು ಮೆಟ್ಲುಗಳೂ ಬಂಗಾರದ ಪಾದಪೀಠವೂ ಇದ್ದವು; ಆಸನಕ್ಕೆ ಎರಡು ಕೈಗಳೂ ಅವುಗಳ ಹತ್ತಿರ ಎರಡು ಸಿಂಹಗಳೂ ಇದ್ದವು.
Kannada Bible (KNCL) BSI 2016
ಅದಕ್ಕೆ ಹೊಂದಿಕೆಯಾಗಿ ಆರು ಮೆಟ್ಟಿಲುಗಳೂ ಬಂಗಾರದ ಪಾದಪೀಠವೂ ಇದ್ದವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈ ಸಿಂಹಾಸನಕ್ಕೆ ಆರು ಮೆಟ್ಟಲುಗಳಿದ್ದವು. ಸಿಂಹಾಸನಕ್ಕೆ ಬಂಗಾರದ ಪಾದ ಪೀಠ ಇತ್ತು. ಕುಳಿತುಕೊಳ್ಳುವ ಆಸನದ ಎರಡು ಕಡೆಗಳಲ್ಲಿ ಕೈಗಳಿದ್ದವು, ಆ ಕೈಗಳ ಬಳಿಯಲ್ಲಿ ಎರಡು ಸಿಂಹಗಳು ನಿಂತಿದ್ದವು.